
ವಾಹನಗಳ ಹ್ಯಾಂಡ್ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿ 14.30 ಲಕ್ಷ ರೂ. ಬೆಲೆಯ 21 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೊರಮಾವು ಎಕ್ಸ್ಟೆನ್ಷನ್, ವಿಜಯಾಬ್ಯಾಂಕ್ ಕಾಲೋನಿ ನಿವಾಸಿ ನಿತಿನ್ ಅಲಿಯಾಸ್ ಗುಂಗುರಕೂದಲು ನಿತಿನ್(23), ರಾಮಮರ್ತಿನಗರದ ಮಾರಪ್ಪ ಅಲಿಯಾಸ್ ಮಾದೇಶ(29) ಮತ್ತು ಬಾಣಸವಾಡಿಯ ಮನೋಜ್ ಅಲಿಯಾಸ್ ಎಮ್ಮೆ(20) ಬಂಧಿತರು.
ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ ಠಾಣೆಯ 2 ಪ್ರಕರಣ, ಕೆಜಿಹಳ್ಳಿ 2, ಕೆಆರ್ ಪುರಂ, ಆವಲಹಳ್ಳಿ, ತಿಲಕ್ನಗರ, ಕಾಮಾಕ್ಷಿಪಾಳ್ಯ ಮತ್ತು ಸೋಲದೇವನಹಳ್ಳಿ ಠಾಣೆಯ ತಲಾ ಒಂದು ಪ್ರಕರಣ ಸೇರಿ ಒಟ್ಟಪು 9 ಪ್ರಕರಣಗಳು ಬೆಳಕಿಗೆ ಬಂದಿವೆ.
ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ ಅವರ ಮಾರ್ಗದಶರ್ನದಲ್ಲಿ ಇನ್ಸ್ಪೆಕ್ಟರ್ ಮೆಲ್ವಿನ್ ಫ್ರಾನ್ಸಿಸ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಸಿ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ.