ರಾಜ್ಯ

ಹೊಸ ವರ್ಷಾಚರಣೆ : ಪ್ಲೈಓವರ್ ಮೇಲೆ ವಾಹನ ಸಂಚಾರ ನಿಷೇಧ

ಹೊಸ ವರ್ಷಾಚರಣೆಗೆ ಆಗಮಿಸುವವರು ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿ ಎಂದು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾದ ಡಾ. ಎಂ.ಎ. ಸಲೀಂ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರತಿದಿನಕ್ಕಿಂತ ಡಿ. 31ರಂದು ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಎಲ್ಲರೂ ಹೊಸ ವರ್ಷಾಚರಣೆಗೆ ಬರುತ್ತಾರೆ.

ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಿದರು.ಈಗಾಗಲೇ ಮೆಟ್ರೋ, ಬಿಎಂಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚಾಗಿ ಒದಗಿಸಲು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ:ಅತಿ ವೇಗ, ಅಜಾಗರೂಕತೆ ಹಾಗೂ ಕುಡಿದು ವಾಹನ ಚಾಲನೆ ಮಾಡುವುದು, ಸಂಚಾರ ವಿಭಾಗದಲ್ಲಿ ಕಂಡು ಬರುವ ಮೂರು ಅಂಶಗಳು. ಹೊಸ ವರ್ಷದ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ನಗರದಾದ್ಯಂತ ಅಂದು ಕುಡಿದು ವಾಹನ ಚಾಲನೆ ಮಾಡುವವರ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಅದೇ ರೀತಿ ಕೆಲವು ಸೆಲಬ್ರೆಟಿಗಳು ತಮ್ಮ ವಾಹನವನ್ನು ಬಹಳ ಹುಮ್ಮಸ್ಸಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಾರೆ.

ಅದರಿಂದ ಅಪಘಾತವಾಗುವ ಸಂಭವವಿದೆ. ಈ ಮೂರು ಅಂಶಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಪ್ಲೈಓವರ್ ಮೇಲೆ ವಾಹನ ಸಂಚಾರ ನಿಷೇಧ:31ರಂದು ರಾತ್ರಿ 9 ಗಂಟೆಯ ನಂತರ ವಿಮಾನ ನಿಲ್ದಾಣಕ್ಕೆ ಹೋಗುವ ಪ್ಲೈಓವರ್ ಹೊರತು ಪಡಿಸಿ ಉಳಿದ ಎಲ್ಲಾ ಪ್ಲೈಓವರ್‍ಗಳ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುತ್ತದೆ.

ಯಾವುದೇ ವಾಹನಗಳನ್ನು ಬಿಡುವುದಿಲ್ಲ. ಅದೇ ರೀತಿ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ಬಂದ್ ಮಾಡುವುದಾಗಿ ಸಲೀಂ ತಿಳಿಸಿದರು.ಯಾರೇ ಆಗಲಿ ಕುಡಿದು ವಾಹನ ಚಾಲನೆ ಮಾಡಬಾರದು.

ಪ್ರತಿಯೊಬ್ಬರ ಪ್ರಾಣ ಮುಖ್ಯ. ಆದ್ದರಿಂದ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮನವಿ ಮಾಡಿದರು.ವಾಹನಗಳಿಗೆ ನಿಬರ್ಂಧ:ನಗರದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮ್ಯುಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ಸೆಂಟ್‍ಮಾಕ್ರ್ಸ್ ರಸ್ತೆ, ಚರ್ಚ್‍ಸ್ಟ್ರೀಟ್‍ಗಳಲ್ಲಿ ಹೊಸ ವರ್ಷಾಚರಣೆಗೆ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತ ದೃಷ್ಟಿಯಿಂದ ವಾಹನಗಳ ಸಂಚಾರ ನಿಲುಗಡೆಯನ್ನು 31ರ ರಾತ್ರಿ ನಿರ್ಬಂಧಿಸಲಾಗಿದೆ.

ತೆರವುಗೊಳಿಸದಿದ್ದಲ್ಲಿ ಕ್ರಮ: ಈ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಿದ್ದಂತಹ ವಾಹನಗಳನ್ನು ಡಿ. 31ರಂದು ಸಂಜೆ 4 ಗಂಟೆ ಒಳಗಾಗಿ ತೆರವುಗೊಳಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಸಲೀಂ ಅವರು ಎಚ್ಚರಿಸಿದ್ದಾರೆ.

ಕಡಿವಾಣ:ಅತಿ ವೇಗ, ಅಜಾಗರೂಕತೆ ಹಾಗೂ ವೀಲ್ಹಿಂಗ್, ಕುಡಿದು ವಾಹನ ಚಾಲನೆ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ.

ಅಂತಹ ಘಟನೆಗಳು ಕಂಡು ಬಂದರೆ ತಕ್ಷಣ ಸಾರ್ವಜನಿಕರು ಪೆÇಲೀಸ್ ಸಹಾಯವಾಣಿ 112ಗೆ ಮಾಹಿತಿ ನೀಡಬೇಕೆಂದು ಸಲೀಂ ಅವರು ಮನವಿ ಮಾಡಿಕೊಂಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button