ರಾಜ್ಯ

ಹೊಸ ವರ್ಷಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಶಾಕ್

ಹೊಸವರ್ಷದ ಸಂಭ್ರಮದಲ್ಲಿದ್ದ ಜನತೆ ತೈಲ ಮಾರುಕಟ್ಟೆ ಕಂಪನಿ ಶಾಕ್ ನೀಡಿದ್ದು, ನೂತನ ವರ್ಷದ ಮೊದಲ ದಿನವೇ ಎಲ್‍ಪಿಜಿ ಸಿಲಿಂಡರ್ ದರವನ್ನು 25 ರೂ.ಗೆ ಹೆಚ್ಚಳ ಮಾಡಿದೆ.ವಾಣಿಜ್ಯ ಸಿಲಿಂಡರ್ ಬೆಲೆಯನ್ನು 25 ರೂ.ಗೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ.

ತೈಲ ಮಾರುಕಟ್ಟೆ ಕಂಪನಿಗಳ(ಓಎಂಸಿ) ವಾಣಿಜ್ಯ ಸಿಲಿಂಡರ್ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿದೆ.ಆದರೆ ಗೃಹಬಳಕೆಯ ಸಿಲಿಂಡರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದಿರುವುದು ಸಮಾಧಾನಕರ ಸಂಗತಿಯಾಗಿದೆ. ವಾಣಿಜ್ಯ ಸಿಲಿಂಡರ್ ದರ ಏರಿಕೆಯಿದ ಹೋಟೆಲ್, ರೆಸ್ಟೋರೆಂಟ್ ಇತ್ಯಾದಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ಜನಸಾಮಾನ್ಯರ ಬಜೆಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಎಲ್‍ಪಿಜಿ ಸಿಲಿಂಡರ್ ಬೆಲೆ ಬದಲಾಗದೆ ಹಾಗೆಯೇ ಉಳಿಯಲಿದೆ. ಇದಲ್ಲದೆ ವರ್ಷಾರಂಭದಲ್ಲಿ ಟೋಲ್ ತೆರಿಗೆ, ಬ್ಯಾಂಕ್ ಲಾಕರ್ ಸೇರಿದಂತೆ ಹಲವು ನಿಯಮಗಳು ಕೂಡ ಬದಲಾಗಿದ್ದು, ಜನಸಾಮಾನ್ಯರ ಜೇಬಿಗೆ ಹೊರೆ ಬೀಳಲಿದೆ.ಕಾರು ಖರೀದಿಯು ಕೂಡ ದುಬಾರಿಯಾಗಲಿದೆ.

ಕ್ರೆಡಿಟ್ ಕಾರ್ಡ್ ನಿಯಮಗಳಲ್ಲೂ ದೊಡ್ಡ ಬದಲಾವಣೆಯಾಗಲಿದೆ. ವಾಹನಗಳ ದರವನ್ನು ಹೆಚ್ಚಿಸಲಾಗಿದ್ದು, ಮಾರುತಿ, ಸುಜುಕಿ, ಹೊಂಡೈ, ಮೋಟಾರ್, ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಆಡಿ, ರೆನಾಲ್ಟ್, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳು ದರ ಹೆಚ್ಚಿಸಿವೆ.ಇಂದಿನಿಂದ ಲಾಕರ್ ನಿಯಮಗಳಲ್ಲಿ ಬದಲಾವಣೆಯಾಗಲಿದೆ.

ಜಿಎಸ್‍ಟಿ ನಿಯಮಗಳಲ್ಲೂ ಕೂಡ ಬದಲಾವಣೆಯಾಗಲಿದ್ದು, ವಾರ್ಷಿಕ 5 ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಇನ್‍ವಾಯ್ಸ್‍ಗಳನ್ನು ಉತ್ಪಾದಿಸುವುದು ಅಗತ್ಯವಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button