ರಾಜ್ಯ
ಹೊಗೆನಕಲ್ ನಲ್ಲಿ 1 ಮೀನು ಹಿಡಿದು 3 ಸಾವಿರ ಸಂಪಾದಿಸಿದ ಮೀನುಗಾರ

ಚಾಮರಾಜನಗರ: ಸಮುದ್ರದಲ್ಲಿ ಸಿಗುವ ತೇಲಿ ಮೀನು ಇದೇ ಮೊದಲ ಬಾರಿಗೆ ಹೊಗೆನಕಲ್ ಜಲಾಶಯದಲ್ಲಿ ಬಲೆಗೆ ಬಿದ್ದಿದ್ದು ಅದೂ ಕೂಡ 12 ಕೆಜಿ ತೂಕದ ಭಾರೀ ಮೀನು ಇದಾಗಿದೆ.ಹೊಗೆನಕಲ್ ನಿವಾಸಿ ಕುಮಾರ್ ಎಂಬವರ ಬಲೆಗೆ ಈ ಮೀನು ಬಿದ್ದಿದ್ದು 12 ಕೆಜಿ ತೂಕದ್ದಾಗಿದೆ.
ಕಳೆದ 25 ವರ್ಷಗಳಲ್ಲಿ ಹೊಗೆನಕಲ್ ನಲ್ಲಿ ಇಷ್ಟು ತೂಕದ ತೇಲಿ ಮೀನು ಇದೇ ಮೊದಲ ಬಾರಿಗೆ ಸಿಕ್ಕಿದ್ದು ಬೇರೆ ಕಡೆ ಇಷ್ಟು ದೊಡ್ಡ ಮೀನು ಸಿಗಲಿದೆ ಆದರೆ ಹೊಗೆನಕಲ್ ಭಾಗದಲ್ಲಿ ಸಿಕ್ಕಿದ್ದು ಅಪರೂಪವಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ಕೆಜಿಗೆ 250 ರೂ.ನಂತೆ 3 ಸಾವಿರ ರೂ.ಗೆ ಈ ಮೀನನ್ನು ಕುಮಾರ್ ಮಾರಾಟ ಮಾಡಿದ್ದು ಭರ್ಜರಿ ಬೇಟೆಗೆ ಸಖತ್ ಸಂತಸಗೊಂಡಿದ್ದಾರೆ.