ಸಿನಿಮಾ
ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್

ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲ ಮೂಡಿಸಿತ್ತು. ಏ.27 ರಂದು ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿತ್ತು. ಈ ಸುದ್ದಿಯ ಜಾಡು ಹಿಡಿದು ಹೊರಟ ಪಬ್ಲಿಕ್ ಟಿವಿ ಡಿಜಿಟಲ್ ತಂಡಕ್ಕೆ ಹಲವು ಮಾಹಿತಿಗಳೂ ದೊರೆತವು. ಹಾಗಾಗಿ ನೆನ್ನೆಯೇ ಪಬ್ಲಿಕ್ ಟಿವಿಯಲ್ಲಿ ಯುವರಾಜ್ ಕುಮಾರ್ ಲಾಂಚ್ ಮಾಡುತ್ತಿರುವ ಕುರಿತು ಎರಡು ವರದಿಗಳನ್ನು ಮಾಡಲಾಗಿತ್ತು.
ಪುನೀತ್ ರಾಜ್ ಕುಮಾರ್ ಅವರ ನಿನ್ನೆಂದಲೇ ಸಿನಿಮಾದ ಮೂಲಕ ಹೊಂಬಾಳೆ ಫಿಲ್ಮ್ಸ್ ಲಾಂಚ್ ಆಗಿತ್ತು. ಈಗ ಪುನೀತ್ ಅವರ ಸಹೋದರನ ಪುತ್ರ ಯುವರಾಜ್ ಕುಮಾರ್ ಲಾಂಚ್ ಮಾಡುವ ಮೂಲಕ ಆ ಪ್ರೀತಿಯ ಕೊಡುಕೊಳ್ಳುವಿಕೆ ಅರ್ಥಪೂರ್ಣ ಮುನ್ನುಡಿ ಬರೆದಿದೆ ಹೊಂಬಾಳೆ ಫಿಲ್ಮ್ಸ್