Uncategorized

ಹೇಳುತ್ತಿದ್ದಿದ್ದು ದನದ ವ್ಯಾಪಾರ, ಮಾಡುತ್ತಿದ್ದಿದ್ದು ಆನೆ ದಂತ ಮಾರಾಟ…ಕೊನೆಗೂ ಸಿಕ್ಕಿಬಿದ್ದ ಐನಾತಿ

ಆನೆ ದಂತವನ್ನು ಬಚ್ಚಿಟ್ಟಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಕಣ್ಣೀಯನಪುರ ಕಾಲೋನಿಯಲ್ಲಿ ನಡೆದಿದೆ.

ಕೇರಳ‌ ಮೂಲದ ಬಾಲನ್(54) ಬಂಧಿತ ಆರೋಪಿ. ಈತ ದನದ ವ್ಯಾಪಾರದ ವೃತ್ತಿಯಲ್ಲಿ ಅಕ್ರಮವಾಗಿ ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ತಮಿಳುನಾಡು ಹಾಗೂ ಕೇರಳದಲ್ಲಿ ಈತನ ವ್ಯಾಪಾರ-ವಹಿವಾಟಿನ ಮೇಲೆ ಕಣ್ಣಿಟ್ಟಿದ್ದ ರಾಜ್ಯದ ಪೊಲೀಸರು ಮಾಹಿತಿ ಸಂಗ್ರಹಿಸಿ ಐನಾತಿಯನ್ನು ಬಂಧಿಸಿದ್ದಾರೆ.ಬಾಲನ್ ನಿಂದ 3 ಕೆಜಿಗೂ ಹೆಚ್ಚು ತೂಕದ 3 ಆನೆ ದಂತಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button