ಹೆರಿಗೆ ನಿರ್ಲಕ್ಷ್ಯ – ಮಗುಸಾವು : ಮೂವರು ವೈದ್ಯರ ಬಂಧನ

ಹೆರಿಗೆಯ ಸಮಯದಲ್ಲಿ ನಿರ್ಲಕ್ಷ್ಯ ತೋರಿ ನವಜಾತ ಶಿಶುವಿನ ಸಾವಿಗೆ ಕಾರಣವಾದ ಆರೋಪದಡಿ ಮೂವರು ವೈದ್ಯರನ್ನು ಬಂಧಿಸಲಾಗಿದೆ.
ವೈದ್ಯಕೀಯ ವರದಿಗಳ ಆಧಾರದ ಮೇಲೆ ಪಾಲಕ್ಕಾಡ್‌ನ ಪಿಎಂಆರ್‌ಸಿಯ ತಂಗಮ್ ಆಸ್ಪತ್ರೆಯ ಮೂವರು ವೈದ್ಯರನ್ನು ಬಂಧಿಸಲಾಗಿದೆ ಎಂದು ಪಾಲಕ್ಕಾಡ್ ಟೌನ್ ಸೌತ್ ಪೊಲೀಸರು ತಿಳಿಸಿದ್ದಾರೆ.
ಬಂಧಿತ ವೈದ್ಯರನ್ನು ಅಜಿತ್, ನೀಲಾ ಮತ್ತು ಪ್ರಿಯದರ್ಶಿನಿ ಎಂದು ಗುರುತಿಸಕಾಗಿದೆ ಪೊಲೀಸರು ತಿಳಿಸಿದ್ದಾರೆ.ಚಿತ್ತೂರು ತತ್ತಮಂಗಲಂ ಮೂಲದ ರಂಜಿತ್ ಅವರ ಪತ್ನಿ ಐಶ್ವರ್ಯ ಹೆರಿಗೆ ವೇಳೆ ಆಸ್ಪತ್ರೆಗೆ ದಾಖಲಾಗಿದ್ದರು.ಆನಂತರ ನಿರ್ಲಕ್ಷ್ಯ ತೋರಿದ ಕಾರಣ ಆಕೆಯ ನವಜಾತ ಶಿಶು ಸಾವನ್ನಪ್ಪಿತ್ತು.
ಈ ಘಟನೆ ಜುಲೈ ಮೊದಲ ವಾರದಲ್ಲಿ ನಡೆದಿದ್ದು ವ್ಯಾಪಕ ಪ್ರತಿಭಟನೆಗಳ ನಂತರ ವೈದ್ಯಕೀಯ ಮಂಡಳಿ ವೈದ್ಯರ ವಿಚಾರಣೆ ನಡೆಸಿತ್ತು.ವಿಚಾರಣೆಯಲ್ಲಿ ಮೂವರು ವೈದ್ಯರ ಕಡೆಯಿಂದ ವೈದ್ಯಕೀಯ ನಿರ್ಲಕ್ಷ್ಯ ಕಂಡುಬಂದಿದೆ.
ಎರಡು ದಿನಗಳ ಹಿಂದೆ ನಡೆದ ಸಭೆಯ ನಂತರ, ಮಂಡಳಿಯು ತನ್ನ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿತು.ಇದೀಗ ಪೊಲೀಸರು ವೈದ್ಯರನ್ನು ಬಂಧಿಸಿದ್ದಾರೆ.