ರಾಜ್ಯ

ಹೆದ್ದಾರಿ ಪಕ್ಕದಲ್ಲೇ ಇರುವ ಈ ಶಾಲೆಗೆ ಕಾಂಪೌಂಡ್ ಇಲ್ಲ; ಭಯದಲ್ಲೇ ವಿದ್ಯಾರ್ಥಿಗಳ ಕಲಿಕೆ

ಚನ್ನಪಟ್ಟಣ: ಪಟ್ಟ,ಣದ ವಾರ್ಡ್‌ ನಂ.30ರಲ್ಲಿರುವ ಅಂಬೇಡ್ಕರ್‌ ನಗರದ ಸರಕಾರಿ ಶಾಲಾ ಆವರಣಕ್ಕೆ ಕಾಂಪೌಂಡ್‌ ಇಲ್ಲವಾಗಿದೆ. ಹೆದ್ದಾರಿ ಬದಿಯಲ್ಲಿರುವ ಶಾಲೆಗೆ ಕಾಂಪೌಂಡ್‌ ಇಲ್ಲದ ಪರಿಣಾಮ ಆತಂಕದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತಾಗಿದೆ.

ಶಾಲಾ ಆವರಣಕ್ಕೆ ಕಾಂಪೌಂಡ್‌ ನಿರ್ಮಿಸಿ ಕೊಡುವಂತೆ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಇಲ್ಲಿನ ನಿವಾಸಿಗಳು ಹಲವಾರು ಬಾರಿ ಮನವಿ ಸಲ್ಲಿಸಿದರೂ, ಕಾಂಪೌಂಡ್‌ ನಿರ್ಮಿಸಲು ಯಾರೂ ಮುಂದಾಗದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1962ರಲ್ಲಿಸ್ಥಾಪನೆಗೊಂಡ ಅಂಬೇಡ್ಕರ್‌ ನಗರದ ಪ್ರಾಥಮಿಕ ಶಾಲೆಯಲ್ಲಿಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಆವರಣಕ್ಕೆ ಅಂದಿನಿಂದ ಇಂದಿನವರೆಗೆ ಕಾಂಪೌಂಡ್‌ ನಿರ್ಮಿಸಿಲ್ಲ.

ಹಲಗೂರು- ಸಾತನೂರು ರಾಜ್ಯ ಹೆದ್ದಾರಿಯಲ್ಲಿರುವ ಈ ಶಾಲೆಯ ಮುಂಭಾಗ ವಾಹನಗಳು ಸಂಚರಿಸಲಿದ್ದು, ಶಾಲಾ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲು ಶಿಕ್ಷಕರು ಭಯ ಬೀಳುತ್ತಿದ್ದಾರೆ.ಇನ್ನು ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾಹನದ ಧೂಳು ಶಾಲಾ ಆವರಣಕ್ಕೆ ಎರಚುತ್ತದೆ.

ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾಂಪೌಂಡ್‌ ಇದ್ದರೆ ಧೂಳು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇನ್ನು ಕಾಂಪೌಂಡ್‌ ಇಲ್ಲದ ಕಾರಣ ಶಾಲಾ ಆವರಣಕ್ಕೆ ಬೀಡಾಡಿ ದನ ಹಾಗೂ ನಾಯಿಗಳು ನುಗ್ಗಿ ಹಾವಳಿ ಇಡುತ್ತಿವೆ.

ಶಿಕ್ಷಣ ಇಲಾಖೆಯಾಗಲಿ ಅಥವಾ ನಗರಸಭೆ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿ ಶಾಲಾ ಆವರಣಕ್ಕೆ ಕಾಂಪೌಂಡ್‌ ನಿರ್ಮಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ನಮ್ಮೂರಿನ ಶಾಲೆ ಸಾತನೂರು ರಸ್ತೆಯಲ್ಲಿರಸ್ತೆ ಬದಿಯಲ್ಲಿದೆ.

ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸಹ ಶಾಲಾ ಆವರಣಕ್ಕೆ ಕಾಂಪೌಂಡ್‌ ನಿರ್ಮಿಸಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಕ್ಕಳ ಮೇಲೆ ಕಾಳಜಿ ಇಲ್ಲ.

ಸಂಬಂಧಿಸಿದವರು ಇನ್ನಾದರೂ ಇತ್ತ ಗಮನಹರಿಸಿ ಶಾಲಾ ಆವರಣಕ್ಕೆ ಕಾಂಪೌಂಡ್‌ ನಿರ್ಮಿಸಲು ಮುಂದಾಗಲಿ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಿ.- ಸೂರ್ಯಪ್ರಸಾದ್‌, ಅಂಬೇಡ್ಕರ್‌ ನಗರ ನಿವಾಸಿ

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button