ಅಪರಾಧ

ಹೆಣ್ಮಕ್ಕಳ ಮೈ ಮುಟ್ಟಿ ಎಸ್ಕೇಪ್ ಆಗುತ್ತಿದ್ದ ಡೆಲವೆರಿ ಬಾಯ್ ಅಂದರ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಮೈ ಮುಟ್ಟಿ ವಿಕೃತಿ ಮೆರೆಯುತ್ತಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಾಯಚೂರು ಮೂಲದ ಗಂಗಾಧರ್ ಬಂಧಿತ ಆರೋಪಿ.ಎರಡು ಪೊಲೀಸ್​ ಠಾಣೆಯಲ್ಲಿ ಈ ಕಾಮುಕನ ಮೇಲೆ ಎಫ್​ಐಆರ್​​ ದಾಖಲಾಗಿತ್ತು.

ಸಿಸಿಟಿವಿಯಲ್ಲಿ ವಿಕೃತನ ಚಲನವಲನ ಪತ್ತೆಯಾಗಿತ್ತು. ಬೈಕಿನಲ್ಲಿ ಬರುತ್ತಿದ್ದ ಈತ ಹೆಣ್ಣುಮಕ್ಕಳ ಮೈ-ಕೈ ಮುಟ್ಟಿ ಎಸ್ಕೇಪ್ ಆಗುತ್ತಿದ್ದ. ನಗರದ ವೈಯಾಲಿಕಾವಲ್ ಸುತ್ತಮುತ್ತ ಈತ ಓಡಾಡ್ತಿದ್ದ.ಜುಲೈ 3ರಂದು ಸೈಕಲಿಂಗ್ ಜಾಥ ಮಾಡ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ.

ಫುಡ್ ಡೆಲಿವರಿ ಮಾಡುವ ನೆಪದಲ್ಲಿ ಬೈಕ್​ ನಲ್ಲಿ ಬರುತ್ತಿದ್ದ ಕಾಮುಕ ಹೆಣ್ಣುಮಕ್ಕಳ ಜತೆ ಅನುಚಿತವಾಗಿ ನಡೆದುಕೊಂಡಿದ್ದ. ಸದ್ಯ ಸದಾಶಿವನಗರ ಪೊಲೀಸರು ಈತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button