ಹೆಜ್ಜಾರ್ಲೆ ಪಕ್ಷಿ ಸಾವು ಹೆಚ್ಚಳ ಹೆಚ್ಚಿದ ಆತಂಕ

ಕೊಕ್ಕರೆ ಬೆಳ್ಳೂರಿನಲ್ಲಿ ಮಾತ್ರ ಕಾಣ ಸಿಗುವ ವಿಶೇಷ ತಳಿ ಪೆಲಿಕನ್ ಪಕ್ಷಿ/ ಹೆಜ್ಜಾರ್ಲೆ ಪಕ್ಷಿ ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.ವಿದೇಶದಿಂದ ಬಂದ ಈ ಪಕ್ಷಿಗಳು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ನೆಲೆಸಿವೆ.
ಈ ಪೈಕಿ ಒಂದು ಪಕ್ಷಿ ಸಾವನ್ನಪ್ಪಿದ್ದು, ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದಾರೆ.ಅಲ್ಲದೆ ಪಕ್ಷಿಯ ಸಾವಿಗೆ ನಿಖರ ಕಾರಣ ತಿಳಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.ಕರ್ನಾಟಕ ರಾಜ್ಯದಲ್ಲೇ ಕೊಕ್ಕರೆ ಬೆಳ್ಳೂರಿನಲ್ಲಿ ಮಾತ್ರ ಕಾಣ ಸಿಗುವ ವಿಶೇಷ ಥಳಿ ಪೆಲಿಕನ್ ಪಕ್ಷಿ ಅಥವಾ ಹೆಜ್ಜಾರ್ಲೆ ಪಕ್ಷಿ ಸಂತಾನೋತ್ಪತ್ತಿಗಾಗಿ ಕೊಕ್ಕರೆ ಬೆಳ್ಳೂರಿಗೆ ಬಂದಿತ್ತು.
ಮಲೇಷಿಯಾ, ಆಸ್ಟ್ರೇಲಿಯಾ ದೇಶಗಳಲ್ಲಿ ಕಾಣ ಸಿಗುವ ಈ ಪಕ್ಷಿಗೆ ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಜಿಪಿಎಸ್ ಅಳವಡಿಸಿದ್ದರು. ಆದರೆ, ದಿನದಿಂದ ದಿನಕ್ಕೆ ಹೆಜ್ಜಾರ್ಲೆ ಪಕ್ಷಿಗಳ ಸಾವಿನಲ್ಲಿ ಗಣನಿಯವಾಗಿ ಏರಿಕೆ ಕಂಡಿದ್ದು, ಪಕ್ಷಿಗಳ ಸಾವಿನಿಂದ ಅಧಿಕಾರಿಗಳು ಕಂಗಾಲಾಗಿದ್ದಾರೆ.ಹೆಜ್ಜಾರ್ಲೆ ಪಕ್ಷಿ ಸಾವು:ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ.
ಪೆಲಿಕಾನ್ ಹಕ್ಕಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಕೆ ಮೂಲಕ ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾ ಗಿತ್ತು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಜ್ಜಾರ್ಲೆ ಪಕ್ಷಿಗೆ ಟ್ರ್ಯಾಕರ್ ಅಳವಡಿಕೆ ಮಾಡಲಾಗಿದ್ದು, ಹೆಜ್ಜಾರ್ಲೆ ಪಕ್ಷಿ ಯಾವ ದೇಶಕ್ಕೆ ಸಂಚರಿಸುತ್ತೆ ಎಲ್ಲಿ ತಂಗುತ್ತೆ ಅದರ ಚಟುವಟಿಕೆಗಳ ಇಂಚಿಂಚೂ ಮಾಹಿತಿಯ ಟ್ರ್ಯಾಕಿಂಗ್ ಮಾಡಲು ಇದು ಸಹಕಾರಿಯಾಗಲಿದೆ.