ಪೊಲೀಸ್ಬೆಂಗಳೂರು

ಹೆಚ್ಚುವರಿ ಆಟೋ ದರಗಳ ವಿರುದ್ಧ ಪೊಲೀಸರಿಂದ ಕಠಿಣ ಕ್ರಮ : ನಿಯಮಗಳನ್ನು ಉಲ್ಲಂಘಿಸಿದ ಆಟೋ ಚಾಲಕರಿಗೆ ದಂಡ

ಬೆಂಗಳೂರು: ಟ್ರಾಫಿಕ್ ಪೊಲೀಸರು ನಗರದಲ್ಲಿ ಬುಧವಾರ ಹೆಚ್ಚುವರಿ ಆಟೋ ದರಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೆಲವು ಚಾಲಕರಿಗೆ ದಂಡ ವಿಧಿಸಿದ್ದಾರೆ.
ರಾಜ್ಯ ಸರ್ಕಾರವು ಈ ಹಿಂದೆ ನಗರದ ಆಟೋ ಚಾಲಕರು ಸಾರಿಗೆ ಇಲಾಖೆಯಿಂದ ನಿಗದಿಪಡಿಸಿದ ನಿಗದಿತ ಮೊತ್ತವನ್ನು ಪ್ರಯಾಣಿಕರಿಂದ ಪಡೆಯುವಂತೆ ಆದೇಶ ಹೊರಡಿಸಿತ್ತು. ಸರ್ಕಾರ ಆದೇಶ ಹೊರಡಿಸಿದ ನಂತರ ಆ್ಯಪ್ ಆಧಾರಿತ ಸೇವೆಗಳ ದರವನ್ನೂ ಕಡಿಮೆ ಮಾಡಲಾಗಿದೆ.

ಇದೀಗ ಫೀಲ್ಡ್ ಗೆ ಇಳಿದಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಯಾಣಿಕರಂತೆ ಆಟೋಗಳಲ್ಲಿ ಪ್ರಯಾಣಿಸುವ ಮೂಲಕ ಆಟೋ ಚಾಲಕರ ನಿಯಮ ಉಲ್ಲಂಘನೆಯ ವಿರುದ್ಧ ಹೊಸ ಡ್ರೈವ್ ಶುರು ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೃಷ್ಣರಾಜಪುರಂ ಸಂಚಾರ ಪೊಲೀಸರು, “ಆಟೋ ಚಾಲಕರ ವಿರುದ್ಧ ನಿಯಮ ಉಲ್ಲಂಘನೆ (ಸಮವಸ್ತ್ರ ಧರಿಸದಿರುವುದು, ಹೆಚ್ಚುವರಿ ಶುಲ್ಕವನ್ನು ಒತ್ತಾಯಿಸುವುದು ಮತ್ತು ಬಾಡಿಗೆಗೆ ನಿರಾಕರಿಸುವುದು ಇತ್ಯಾದಿ) ವಿರುದ್ಧ ಕಠಿಣ ಕ್ರಮ” ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಬೇಡಿಕೆಯಿಡಲು, ಚಲಾಯಿಸಲು ನಿರಾಕರಿಸಿದ ಮತ್ತು ಇತರ ಸಮಸ್ಯೆಗಳಿಗಾಗಿ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಆಟೋ ರಿಕ್ಷಾಗಳು ವಿಧಿಸುವ ಹೆಚ್ಚುವರಿ ದರಗಳ ವಿರುದ್ಧ ಈ ಮುನ್ನ ವಿಶೇಷ ಡ್ರೈವ್ ಅನ್ನು ಜುಲೈ 2019 ರಲ್ಲಿ ನಡೆಸಲಾಗಿತ್ತು. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಕೆಆರ್ ಪುರಂ ಸಂಚಾರ ಪೊಲೀಸರು, ”ಹೆಚ್ಚುವರಿ ದರಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಹಾಗೂ ಬಾಡಿಗೆಗೆ ತೆರಳಲು ನಿರಾಕರಿಸಿದ್ದಕ್ಕೆ ಆಟೋಗಳ ವಿರುದ್ಧ ವಿಶೇಷ ಅಭಿಯಾನ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಹಂಚಿಕೊಂಡಿರುವ ವಿಡಿಯೋದಲ್ಲಿ ಆಟೋ ಚಾಲಕನೊಬ್ಬ ಟ್ರಾಫಿಕ್ ಕಾರಣ ನೀಡಿ ಕೆಆರ್ ಪುರಂನಿಂದ ಫೀನಿಕ್ಸ್ ಮಾರ್ಕೆಟ್ ಸಿಟಿಗೆ ತೆರಳಲು ಮೀಟರ್ ಇಲ್ಲದೇ ರೂ.150ಕ್ಕೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸ್ ಸಿಬ್ಬಂದಿ ಪ್ರಯಾಣಿಕರಂತೆ ಆತನೊಂದಿಗೆ ಮಾತುಕತೆ ನಡೆಸಿ ನಂತರ ಚಾಲಕನಿಗೆ ದಂಡ ವಿಧಿಸಿದರು.

Related Articles

Leave a Reply

Your email address will not be published. Required fields are marked *

Back to top button