ಹೆಂಡತಿ ತಂಗಿ ಮೇಲೆ ಕಣ್ಣಿಟ್ಟವನ ಕೈ ಕತ್ತರಿಸಿದ್ದ ಭಾವ, ಮೂವರು ಅಂದರ್.!

ಬೆಂಗಳೂರು: ಹೆಂಡತಿ ತಂಗಿ ಮೇಲೆ ಕಣ್ಣು ಹಾಕಿದ್ದ ಯುವಕನ ಕೈ ಕತ್ತರಿಸಿ ಪರಾರಿಯಾಗಿದ್ದ ಯುವತಿಯ ಭಾವ ಸೇರಿ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಮುಬಾರಕ್ ಖಾನ್, ಮಹಮ್ಮದ್ ಸಲೀಂ, ಅಬೂಬಕ್ಕರ್ ಸಿದ್ಧಿಕಿ ಕಂಬಿ ಈಗ ಮುದ್ದೆ ಮುರಿಯುತ್ತಿರುವವರು.
ತಂಟೆ ತಕರಾರು ಮಾಡಿಕೊಂಡು ಓಡಾಡಿಕೊಂಡಿದ್ದ ಶೋಯೆಬ್ ಎಂಬಾತ ಬಂಧಿತ ಮುಬಾರಕ್ ಹೆಂಡತಿಯ ತಂಗಿ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತಾ ಕಾಟ ಕೊಡುತ್ತಿದ್ದನಂತೆ.
ಹೀಗಾಗಿ ಶೋಯೊಬ್‌ಗೆ ಮುಬಾರಕ್ ಹಲವು ಬಾರಿ ವಾರ್ನ್ ಮಾಡಿದ್ದ. ಇದಕ್ಕೆ ಕೇರ್ ಮಾಡದ ಶೋಯೆಬ್ ಯುವತಿ ಹೋಗಿ ಬರೋ ದಾರಿಯಲ್ಲಿ ಚುಡಾಯಿಸಿ ಲವ್ ಮಾಡು ಅಂತಾ ಪೀಡಿಸುತ್ತಿದ್ದ.
ಈತನ ಕಾಟ ತಾಳಲಾರದೇ ಯುವತಿ ಭಾವ ಹಾಗೂ ಅಕ್ಕನ ಬಳಿ ಮತ್ತೆ ನೋವನ್ನು ಹೇಳಿಕೊಂಡಿದ್ದಳು. ಇದರಿಂದ ರೊಚ್ಚಿಗೆದ್ದ ಮುಬಾರಕ್, ಶೋಯೆಬ್‌ಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದ.
ಇದೇ ಟೈಮಲ್ಲಿ ಶೋಯೆಬ್, ಮುಬಾರಕ್ ಸಂಬಂಧಿ ಜೀಲನ್ ಎಂಬಾತನ ಮೇಲೆ ತನ್ನ ಗ್ಯಾಂಗ್ ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದ.
ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮುಬಾರಕ್ ತನ್ನ ಗೆಳೆಯರೊಂದಿಗೆ ಸೇರಿ ಕಳೆದ ತಿಂಗಳ 27ನೇ ತಾರೀಖು ನಡುರಾತ್ರಿ ಬಾಪೂಜಿನಗರದಲ್ಲಿ ಶೋಯೆಬ್ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದ.
ಈ ಘಟನೆಯಲ್ಲಿ ಶೋಯೆಬ್‌ನ ಕೈ ಕಟ್ ಆಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶೋಯೊಬ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.