ಹೂಡಿಕೆದಾರರಿಗೆ ರತ್ನಗಂಬಳಿ

ಬಂಡವಾಳ ಹೂಡಿಕೆದಾರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬೆಂಗಳೂರಿನ ಅರಮನೆ ಆವರಣದಲ್ಲಿಂದು ಆರಂಭವಾದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿಗಳು, ಆಡಳಿತ ವ್ಯವಸ್ಥೆಯಲ್ಲಿ ಕೆಂಪುಪಟ್ಟಿಗೆ ವಿದಾಯ ಹೇಳಿ ಹೂಡಿಕೆದಾರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕು ಎಂದರು.
ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಸಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕಾಗಿ ನಮ್ಮ ಸರ್ಕಾರ ೧,೫೦೦ ಹಳೆಯ ಮತ್ತು ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ ಎಂದರು.ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ತೊಡಕಾಗಿದ್ದ ಹಲವು ಕಾನೂನುಗಳನ್ನು ತೆಗೆದುಹಾಕಿ ಉದ್ಯಮಿಗಳಿಗೆ ಬಂಡವಾಳ ಹೂಡಲು ಅನುಕೂಲ ಮಾಡಿಕೊಡಲಾಗಿದೆ.
ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಸಲಾಗುತ್ತಿದೆ ಎಂದರು.ರಾಜ್ಯಗಳು ಪ್ರಗತಿ ಸಾಧಿಸಿದರೆ ದೇಶವು ಅಭಿವೃದ್ಧಿ ಹೊಂದುತ್ತದೆ. ಈ ದಿಸೆಯಲ್ಲಿ ಜಾಗತಿಕ ಹೂಡಿಕೆದಾರರ ಸಮ್ಮೇಳನ ಒಂದು ಉತ್ತಮ ಪ್ರಯತ್ನ, ಇದರಿಂದ ಬಂಡವಾಳ ಹರಿದು ಬಂದು ದೇಶದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.ಕೋವಿಡ್ ಸಂಕಷ್ಟದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ದೇಶ ಪ್ರಗತಿಯ ಹಾದಿಯಲ್ಲಿದೆ.
ಎಲ್ಲ ಸವಾಲುಗಳನ್ನು ಎದುರಿಸಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದ. ದೇಶವು ಈಗ ಡಿಜಿಟಲ್ ಕ್ರಾಂತಿಯ ಹಾದಿಯಲ್ಲಿದೆ. ಅದಕ್ಕೆ ಪೂರಕವಾಗಿ ನಾವೆಲ್ಲ ಕೆಲಸ ಮಾಡಬೇಕು ಎಂದರು.ಕರ್ನಾಟಕದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಸ್ಪರ್ಧಾತ್ಮಕ ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಯ ಭಾಗ, ಜಗತ್ತಿನ ಹಲವು ರಾಷ್ಟ್ರಗಳು ರಾಜ್ಯವೊಂದರಲ್ಲಿ ಹಲವು ಸಾವಿರ ಕೋಟಿ ರೂ.ಗಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕುವರು.
ಇದರಿಂದ ದೇಶದಕ್ಕೆ ಮತ್ತಷ್ಟು ವಿದೇಶಿ ನೇರ ಬಂಡವಾಳ ಹರಿದು ಬರಲಿದೆ ಎಂದರು.ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅನುಷ್ಟಾನ ಮಾಡಲು ಸರ್ಕಾರ ಬದ್ದವಾಗಿದೆ. ಹೂಡಿಕೆದಾರರನ್ನು ರೆಡ್ ಟೇಪ್ ನಿಂದ ಮುಕ್ತಗೊಳಿಸಿದ್ದೇವೆ ಮತ್ತು ಉದ್ಯಮಿದಾರರಿಗೆ ಅವಕಾಶಗಳ ರೆಡ್ ಕಾರ್ಪೆಟ್ ನೀಡಿದ್ದೇವೆ ರಕ್ಷಣೆ, ಡ್ರೋನ್‌ಗಳು, ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ಮ್ಯಾಪಿಂಗ್‌ನಂತಹ ಖಾಸಗಿ ಹೂಡಿಕೆಗಳಿಗೆ ಈ ಹಿಂದೆ ಮುಚ್ಚಲಾಗಿದ್ದ ವಿವಿಧ ವಲಯಗಳಲ್ಲಿನ ಹೂಡಿಕೆಗೆ ಪೊ?ರೀತ್ಸಾಹಿಸಿದ್ದೇವೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆ ಬಲಿಷ್ಠ:ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆ ಬಲಷ್ಠವಾಗಿವೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆ ಮತ್ತಷ್ಟು ಬಲಪಡಿಸಲು ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಇಂದಿಲ್ಲಿ ಹೇಳಿದ್ದಾರೆ.
ವಿಮಾನ ನಿಲ್ದಾಣ, ಮೆಟ್ರೋ ರೈಲು ವಿಸ್ತರಣೆ ಮತ್ತು ಅನೇಕ ಹೊಸ ರೈಲು ಯೋಜನೆ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು ,ಇದರಿಂದ ಸುಲಭ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ವೆಸ್ಟ್ ಕರ್ನಾಟಕದ ಶೃಂಗ ಹಿನ್ನೆಲೆಯಲ್ಲಿ ಜಗತ್ತಿನ ಹಲವು ರಾಷ್ಟ್ರಗಳ ಹೂಡಿಕೆದಾರರು ರಾಜ್ಯವೊಂದರಲ್ಲಿ ಹಲವು ಸಾವಿರ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ದೇಶಕ್ಕೆ ಮತ್ತಷ್ಟು ವಿದೇಶಿ ನೇರ ಬಂಡವಾಳ ಹರಿದು ಬರಲಿದೆ ಎಂದರು.ದೇಶದ ಅರ್ಥ ವ್ಯವಸ್ಥೆ ದಿನದಿಂದ ದಿನಕ್ಕೆ ಸರಿದಾರಿಯತ್ತ ಸಾಗುತ್ತಿದೆ.
ಇದರಿಂದಾಗಿ ದಾಖಲೆ ಪ್ರಮಾಣದಲ್ಲಿ ದೇಶದಲ್ಲಿ ಹೂಡಿಕೆಯಾಗುತ್ತಿದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅವರು ಹೇಳಿದ್ದಾರೆ.ಕೋವಿಡ್ ಮಹಾಮಾರಿಯ ಸಮಯದಲ್ಲಿ ಇಡೀ ವಿಶ್ವ ನಲುಗಿ ಹೋಗಿದೆ ಆದರೂ ದೇಶದಲ್ಲಿ ದೇಶದಲ್ಲಿ ಮೂಲಸೌಲಭ್ಯ ಹೆಚ್ಚಳ ಮಾಡಲಾಗಿದೆ.
ಈ ಮೂಲಕ ಭಾರತದ ತಾಕತ್ತು ಇಡಿ ವಿಶ್ವಕ್ಕೆ ಗೋತ್ತಾಗುತ್ತಿದೆ ಎಂದರು.ಸಮಾವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್,ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಷಿ, ಪಿಯೂಷ್ ಗೋಯಲ್, ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಬ್ರಾಂಡ್ ಬೆಂಗಳೂರು ಮೋದಿ ಮೆಚ್ಚುಗೆಬ್ರಾಂಡ್ ಬೆಂಗಳೂರಿನ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿಗಳು, ಬ್ರಾಂಡ್ ಬೆಂಗಳೂರು ಜಗತ್ತಿನಾದ್ಯಂತ ಹೆಸರು ಮಾಡಿದೆ.
ಪ್ರತಿಭೆ ಮತ್ತು ತಂತ್ರಜ್ಞಾನ ಇವೆರಡೂ ಈ ನಗರದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಬ್ರಾಂಡ್ ಬೆಂಗಳೂರಿಗೆ ಜಾಗತಿಕವಾಗಿ ಆದ್ಯತೆ, ಪರಿಗಣನೆ ಇದೆ. ಸಂಸ್ಕೃತಿ ಮತ್ತು ಪ್ರಕೃತಿ ಎರಡೂ ಇರುವ ತಂತ್ರಜ್ಞಾನ ಮತ್ತು ಸಂಪ್ರದಾಯ ಎರಡನ್ನೂ ಒಳಗೊಂಡಿರುವ ಕರ್ನಾಟಕ ಸಂಸ್ಕೃತಿ ಉನ್ನತ ಮಟ್ಟದ್ದು, ಕನ್ನಡಿಗರ ಸ್ವಾಭಿಮಾನ ದೊಡ್ಡದು ಎಂದು ಶ್ಲಾಘಿಸಿದರು.
ಕರ್ನಾಟಕದ ಜನ ನಿನ್ನೆಯಷ್ಟೇ ಕರ್ನಾಟಕ ರಾಜ್ಯೋತ್ಸವ ಆಚರಿಸಿದ್ದಾರೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದ ಪ್ರಧಾನಿಗಳು, ಭಾರತಕ್ಕೆ ನಮ್ಮ ಕರ್ನಾಟಕಕ್ಕೆ ನಮ್ಮ ಬೆಂಗಳೂರಿಗೆ ಸ್ವಾಗತ ಎಂದು ಹೇಳಿ ಬೆಂಗಳೂರಿನ ಬಗೆಗಿನ ಅಭಿಮಾನ ವ್ಯಕ್ತಪಡಿಸಿದರು.