ಹುಟ್ಟುಹಬ್ಬದ ದಿನವೇ ಮಸಣ ಸೇರಿದ ಯುವಕ: ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ

ಬೆಂಗಳೂರು: ಹುಟ್ಟುಹಬ್ಬ ದಿನದಂದೇ ಯುವಕನೊಬ್ಬ ಮಸಣ ಸೇರಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆ ನಡೆದಿದ್ದು, ಹೆಚ್.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ ಹತ್ಯೆಯಾದ ದುದೈರ್ವಿಯಾಗಿದ್ದಾನೆ. ನೈಸ್ ರೋಡ್ ಬಳಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನೆಯಿಂದ ಹೊರ ಹೋಗಿದ್ದ. ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇಂದು ಬೆಳಗ್ಗೆ ಹೆಮ್ಮಿಗೆಪುರ ವಾರ್ಡ್ ನೈಸ್ ರೋಡ್ ನ ಸುರಂಗದ ಬಳಿ ಕಲ್ಲಿನಿಂದ ಜಿಜ್ಜಿ ರುಂಡವನ್ನ ಬೇರ್ಪಡಿಸಿರುವ ಸ್ಥಿತಿಯಲ್ಲಿ ಹೇಮಂತ್ ಶವ ಕಂಡುಬಂದಿದೆ. ಈ ಬಗ್ಗೆ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಕುಟುಂಬಸ್ಥರು ಆಗಮಿಸಿ ಮೃತನ ಗುರುತನ್ನ ಪತ್ತೆ ಹಚ್ಚಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು,ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಶ್ವಾನದಳ ಹಾಗೂ ಎಫ್ ಎಸ್ ಎಲ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ.