ರಾಜ್ಯ

ಹಿರಿಯ ಸಾಹಿತಿ ಭೈರಪ್ಪ ಸೇರಿ ಮೂವರಿಗೆ ‘ಭಾರತರತ್ನ’ ಶತಮಾನೋತ್ಸವ ಪದವಿ

ಮೈಸೂರು: ಹಿರಿಯ ಸಾಹಿತಿ ಎಸ್‌.ಎಲ್. ಭೈರಪ್ಪ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ಐಐಐಟಿ ಸಂಸ್ಥಾಪಕ ನಿರ್ದೇಶಕ ಪ್ರೊ.ಎಸ್‌. ಸಡಗೋಪನ್‌ ಅವರಿಗೆ ಮೈಸೂರು ವಿಶ್ವವಿದ್ಯಾಲಯ ‘ಭಾರತ ರತ್ನ ಶತಮಾನೋತ್ಸವ ಪದವಿ’ ನೀಡಲು ತೀರ್ಮಾನಿಸಿದೆ.

ರಾಜ್ಯದ ಪ್ರತಿಷ್ಠಿತ ಮೈವಿವಿ 2016ರಲ್ಲಿಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಇದರ ನೆನಪಿಗಾಗಿ ಶತಮಾನೋತ್ಸವ ವರ್ಷದಿಂದ ಮೈಸೂರು ವಿಶ್ವವಿದ್ಯಾಲಯವು ‘ಭಾರತ ರತ್ನ ಶತಮಾನೋತ್ಸವ ಪದವಿ’ ನೀಡುತ್ತಿದೆ.

2022ರ ಸಾಲಿನಲ್ಲಿ ನೀಡಲಾಗುವ ಮೈಸೂರು ವಿಶ್ವವಿದ್ಯಾಲಯ ಭಾರತ ರತ್ನ ಶತಮಾನೋತ್ಸವ ಪದವಿಗೆ ಮೂವರನ್ನು ಸಮಿತಿಯು ಆಯ್ಕೆ ಮಾಡಿದೆ. ಡಾ.ಎಸ್‌.ರಾಧಾಕೃಷ್ಣನ್‌ ಸಾಮಾಜಿಕ ವಿಜ್ಞಾನ ಶತಮಾನೋತ್ಸವ ಪದವಿಗೆ ಹಿರಿಯ ಸಾಹಿತಿ ಪ್ರೊ.ಎಸ್‌.ಎಲ….ಭೈರಪ್ಪ, ಸರ್‌.ಎಂ.ವಿಶ್ವೇಶ್ವರಯ್ಯ ನಾವೀನ್ಯ ತಂತ್ರಜ್ಞಾನ ಪದವಿಗೆ ಐಐಐಟಿ ಸಂಸ್ಥಾಪಕ ನಿರ್ದೇಶಕ ಪ್ರೊ.ಎಸ್‌.ಸಡಗೋಪನ್‌ ಮತ್ತು ಪ್ರೊ.ಸಿ.ಎನ್‌.ಆರ್‌.ರಾವ್‌ ವಿಜ್ಞಾನ ಶತಮಾನೋತ್ಸವ ಪದವಿಗೆ ವಿಶ್ರಾಂತ ಕುಲಪತಿ, ವಿಜ್ಞಾನಿ ಪ್ರೊ.ಕೆ.ಎಸ್‌.ರಂಗಪ್ಪ ಅವರು ಭಾಜನರಾಗಿದ್ದಾರೆ.

ಹಿರಿಯ ಸಾಹಿತಿಯಾದ ಭೈರಪ್ಪನವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇತ್ತೀಚೆಗೆ, ಅವರು ಹಾಸನಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದಿದ್ದರು. ವರ್ಷಕ್ಕೆ ಒಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬ (Hasanamba) ದೇವಿ ದರ್ಶನಕ್ಕೆ ರಾಜ್ಯದ ನಾನಾ ಭಾಗದಿಂದ ಭಕ್ತರು, ಗಣ್ಯರು ಆಗಮಿಸಿದ್ದರು.

ದರ್ಶನ ಶುರುವಾಗಿ, ಎಂಟನೇ ದಿನ (ಅ. 22) ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ (SL Bhyrappa) ಸೇರಿದಂತೆ ಹಲವು ಗಣ್ಯರು ದೇವಿ ದರ್ಶನ ಪಡೆದರು. ಭೈರಪ್ಪನವರ ಜೊತೆಗೆ, ಶಿವಗಂಗೆ ಬೆಟ್ಟದ ಮಲಯಮುನಿ ಶಾಂತವೀರ ಸ್ವಾಮೀಜಿ, ಬಸವ ಕಲ್ಯಾಣ ಮಠದ ಸದಾಶಿವ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುನಂದಾ ಪಾಲನೇತ್ರ ಮತ್ತಿತರರು ಆಗಮಿಸಿ ದರ್ಶನ ಪಡೆದರು.

ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ದೇವಾಲಯಕ್ಕೆ ಆಗಮಿಸಿ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಪ್ರಸಾದ ವಿತರಣಾ ಕೌಂಟರ್‌ ಬಳಿಗೆ ಆಗಮಿಸಿ ತಾವೇ ಪ್ರಸಾದ ವಿತರಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button