
ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಟ ಉಪ್ಪಲಪತಿ ಕೃಷ್ಣಂ ರಾಜು (83) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಿಧನರಾಗಿದ್ದಾರೆ. ಪತ್ನಿ ಮತ್ತು ಮೂವರು ಪುತ್ರಿಯರು ಹಾಗು ಅಪಾರ ಅಬಿಮಾನಿಗಳನ್ನು ಅಗಲಿದ್ದಾರೆ.
ಕೋವಿಡ್‍ಸೋಂಕಿನಿಂದ ಬಳಲಿದ್ದ ಅವರು ಚೇತರಿಸಿಕೊಂಡಿದ್ದರು ಆದರೆ ನ್ಯುಮೋನಿಯಾದಿಂದ ಆನಾರೋಗ್ಯಕ್ಕೆ ಒಳಗಾಗಿ ಕಳೆದ ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು.
ರೆಬೆಲ್ ಸ್ಟಾರ್ ಎಂದು ಕರೆಯಲ್ಪಡುವ ರಾಜು 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ತಮ್ಮ ಬಂಡಾಯ ಪಾತ್ರಗಳ ಮೂಲಕ ಟಾಲಿವುಡ್‍ನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಕಳೆದ 1966 ರಲ್ಲಿ ತೆಲುಗುಚಿತ್ರ ಚಿಲಕಾ ಗೋರಿಂಕಾ ಮೂಲಕ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿ ಐವತ್ತು ವರ್ಷಗಳ ಕಾಲ ಹಲವು ಚಿತ್ರಗಳಲ್ಲಿ ನಾಯಕನಾಗಿ ಪ್ರಧಾನ ಪಾತ್ರದಲ್ಲಿ ನಟಿಸಿ, ತಮ್ಮ ವಿಶಿಷ್ಟ ಅಭಿನಯದ ಮೂಲಕ ಗಮನಸೆಳೆದಿದ್ದರು,
ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದರು. ಕೃಷ್ಣಂ ರಾಜು ಬಾಹುಬಲಿ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ ಚಿತ್ರ ನೋಡಿ ಕೊಂಡಾಡಿದ್ದರು.
ಸಿನಿಪ್ರಿಯರ ಮನಗೆದ್ದಿದ್ದ ಕೃಷ್ಣಂ ರಾಜು ಅವರ ನಿಧನದಿಂದ ತೆಲುಗು ಬೆಳ್ಳಿತೆರೆಗೆ ತುಂಬಲಾರದ ನಷ್ಟವಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‍ಸಂತಾಪ ವ್ಯಕ್ತಪಡಿಸಿದ್ದಾರೆ.
ಕೃಷ್ಣಂ ರಾಜು ಅವರ ನಿಧನ ನೋವು ತಂದಿದೆ ಮತ್ತು ಬಿಜೆಪಿ, ತೆಲುಗು ಚಿತ್ರರಂಗ ಮತ್ತು ಜನತೆಗೆ ದೊಡ್ಡ ನಷ್ಟವಾಗಿದೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್‍ಕಂಬನಿ ಮಿಡಿದಿದ್ದರೆ.
ಇತ್ತೀಚೆಗೆ ಹೃದಯ ಸೊಂಕು ಹೆಚ್ಚಾಗಿ ಮತ್ತು ಮೂತ್ರಪಿಂಡದಲ್ಲಿ ನಿಷ್ಕಿøಯಗೊಂಡಿತ್ತು ನಂತರ ವೆಂಟಿಲೇಟರ್ ಆಳವಡಿಸಿ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದರೂ ಪ್ರಯೋಜನವಾಗದೆ ಕೊನೆಯುಸಿರೆಳೆದಿದ್ದಾರೆ.