
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್ ಶುಕ್ರವಾರ ಅನಂತನಾಗ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ನಂತರ ಮಾತನಾಡಿದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್, ‘ಅನಂತನಾಗ್ ಚಿತ್ರರಂಗಕ್ಕೆ ಬಂದ ಸುವರ್ಣ ಮಹೋತ್ಸವದ ವರ್ಷದಲ್ಲಿ ಗೌರವ ಡಾಕ್ಟರೇಟ್ ನೀಡುವ ಮೂಲಕ, ಬೆಂಗಳೂರು ಉತ್ತರ ವಿವಿ ತನ್ನನ್ನು ತಾನೇ ಗೌರವಿಸಿ ಕೊಂಡಿದೆ’ ಎಂದು ಬಣ್ಣಿಸಿದರು.
ಅಧ್ಯಯನಶೀಲತೆ ಮತ್ತು ಚಿಂತನ ಶೀಲತೆಗಳನ್ಮು ರೂಢಿಸಿಕೊಂಡಿರುವ ಅನಂತನಾಗ್, ಸಾರ್ವಜನಿಕ ಜೀವನದಲ್ಲಿ ಕೂಡ ತಮ್ಮ ಛಾಪು ಮೂಡಿಸಿದ ಮೇರು ವ್ಯಕ್ತಿ ಎಂದು ಅವರು ವಿವರಿಸಿದ್ದಾರೆ.
ಅನಂತನಾಗ್ ನೇರ ಮತ್ತು ನಿಷ್ಠುರ ನುಡಿಗೆ ಹೆಸರಾಗಿದ್ದಾರೆ. ನಾಗ್ ಸಹೋದರರು ಕನ್ನಡ ನಾಡಿನ ಅದ್ಬುತ ಜೋಡಿ ಎಂದು ಕೊಂಡಾಡಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ನಟ ಅನಂತನಾಗ್, “ಮಲ್ಲೇಶ್ವರಂ ಕ್ಷೇತ್ರದ ಅಭಿವೃದ್ಧಿಗೆ ಅಶ್ವತ್ಥನಾರಾಯಣ ಮಾಡುತ್ತಿರುವ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಶ್ವತ್ ನಾರಾಯಣ್ ತಮ್ಮ ಕ್ಷೇತ್ರದ ಹಿರಿಯ ನಾಗರಿಕರ ಹಿತಚಿಂತಕರಾಗಿದ್ದು, ಇಂಥವರು ಎಷ್ಟು ಸಲ ಶಾಸಕರಾಗಿ ಆಯ್ಕೆಯಾದರೂ ಸಂತೋಷವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ನಿರಂಜನ, ನಿಕಟಪೂರ್ವ ಕುಲಪತಿ ಕೆಂಪರಾಜು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮುಂತಾದವರು ಇದ್ದರು.