
ಹಿಜಾಬ್ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಪ್ರಕಟವಾದ ಹಿನ್ನೆಲೆ ಪ್ರಕರಣವನ್ನ ಮುಖ್ಯನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಸರ್ಕಾರ ಶಾಲಾ-ಕಾಲೇಜಿನಲ್ಲಿ ಹಿಜಾನ್ ಬ್ಯಾನ್ ಮಾಡಿದ್ದು, ಸರ್ಕಾರದ ಆದೇಶವನ್ನ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮುಸ್ಲೀಂ ವಿದ್ಯಾರ್ಥಿನೀಯರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಗುಪ್ತಾ, ನ್ಯಾ ಸುಧಾಂಶು ಅವರ ನೇತೃತ್ವದ ಪೀಠ ಇದೀಗ ವಿಭಿನ್ನ ತೀರ್ಪು ನೀಡಿದೆ. ನ್ಯಾ. ಹೇಮಂತ್ ಗುಪ್ತಾ ಅವರು ಮುಸ್ಲೀಂ ವಿದ್ಯಾರ್ಥಿನೀಯರ ಮೇಲ್ಮನವಿ ಅರ್ಜಿ ವಜಾಗೊಳಿಸಿದೆ. ನಾನು ಎಲ್ಲಾ ಅರ್ಜಿ ವಜಾಗೊಳಿಸಲು ಬಯಸುತ್ತೇನೆ ಎಂದಿದ್ದಾರೆ.
ಹಾಗೆಯೇ ನ್ಯಾಯಮೂರ್ತಿ ಸುಧಾಂಶು ಅವರು ಹೈಕೋರ್ಟ್ ಆದೇಶವನ್ನ ರದ್ಧುಗೊಳಿಸಿದ್ದಾರೆ. ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಪ್ರಕಟ ಹಿನ್ನೆಲೆ ಪ್ರಕರಣ ಮುಖ್ಯ ನ್ಯಾಯಾಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಮುಂದೆ ವಿಸ್ತೃತ ಪೀಠವನ್ನ ಸಿಜೆಐ ರಚನೆ ಮಾಡಲಿದ್ದು ಅಲ್ಲಿವರೆಗೂ ಹೈಕೋರ್ಟ್ ತೀರ್ಪು ಯಥಾಸ್ಥಿತಿಯಲ್ಲಿರಲಿದೆ.