ಹಿಂದಿ ಹೆಸರಲ್ಲಿ ಹಿಂದುತ್ವ ಹೇರಿಕೆಗೆ ಆರ್‌ಎಸ್‌ಎಸ್ ಯತ್ನ ಸಿದ್ದು ಕಿಡಿ

ಹಿಂದಿ ಭಾಷೆಯ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ತಂಡ (ಆರ್‌ಎಸ್‌ಎಸ್) ಹಿಂದುತ್ವ ಹೇರಲು ಹೊರಟಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಿಂದುತ್ವ ಹೇರಲು ಹೊರಟಿರುವ ಆರ್‌ಎಸ್‌ಎಸ್ ನಿಲುವನ್ನು ಖಂಡಿಸಿದ್ದಾರೆ.ಯಾವ ಭಾಷೆ ಕಲಿಕೆಯನ್ನು ವಿರೋಧಿಸುವುದಿಲ್ಲ. ಯಾವ ಭಾಷೆ ಹೇರಿಕೆಯನ್ನೂ ಸಹಿಸುವುದಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಪೂಜೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟ್ವೀಟ್ ಮಾಡಿ ತಾವು ಸದಾ ಭಾಷೆ ಕಲಿಯುವ ವಿದ್ಯಾರ್ಥಿ, ೬ ಭಾಷೆ ಮಾತನಾಡುತ್ತೇನೆ. ಹಲವು ಭಾಷೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ.
ಹಿಂದಿ ಸೇರಿದಂತೆ ಎಲ್ಲ ಭಾಷೆಯ ಮೇಲೆ ಗೌರವವಿದೆ. ಆದರೆ, ಹಿಂದಿ ಹೇರಿಕೆ ಧಿಕ್ಕಾರವಿದೆ ಎಂದು ತಿಳಿಸಿದ್ದಾರೆ.ಭಾಷೆ ಹೇರಿಕೆಯ ಹಿಂದೆ ಅರ್‌ಎಸ್‌ಎಸ್‌ನ ಕುತಂತ್ರ, ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ನಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.