ಹಾವು ನೀರು ಕುಡಿಯುವ ವಿಡಿಯೋ ವೈರಲ್! ಶಾಕ್ ಆದ ನೆಟ್ಟಿಜನ್

ಹಾವುಗಳು ಸಾಮಾನ್ಯವಾಗಿ ಹೆಚ್ಚು ನೀರು ಕುಡಿಯುವುದಿಲ್ಲ ಎನ್ನುತ್ತಾರೆ ತಜ್ಞರು. ಹಾವುಗಳು ನೀರು ಕುಡಿಯುವುದು ಅಪರೂಪ. ಹಾವಿನ ತಲೆಯ ಕೆಳಭಾಗವು ನೀರನ್ನು ಸ್ಪರ್ಶಿಸುತ್ತಿದ್ದಂತೆ, ನೀರು ಚರ್ಮದ ಪದರಗಳ ಮೂಲಕ ಪ್ರವೇಶಿಸುತ್ತದೆ.
ಕ್ಯಾಪಿಲ್ಲರಿಟಿಯಿಂದಾಗಿ ಹಾವುಗಳ ಆಹಾರ ನಾಳಕ್ಕೆ ನೀರು ಸೇರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ ವಿಡಿಯೋದಲ್ಲಿ ಹಾವು ಗ್ಲಾಸ್ ನಲ್ಲಿದ್ದ ನೀರನ್ನು ಕೆಲವೇ ಸೆಕೆಂಡ್‌ನಲ್ಲಿ ಖಾಲಿ ಮಾಡಿದೆ.
ಹಾವಿನ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ‘ರಿಚ್ ಸ್ನೇಕ್ಸ್’ ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿರುವ ಹಾವು ಗ್ಲಾಸ್ ನಲ್ಲಿದ್ದ ನೀರನ್ನು ಹಾವು ಕ್ಷಣಮಾತ್ರದಲ್ಲಿ ಕುಡಿದಿದೆ.
ಹಾವು ಗ್ಲಾಸಿನಲ್ಲಿದ್ದ ನೀರಿಗೆ ತಲೆ ಹಾಕಿ ಅತಿವೇಗವಾಗಿ ಕುಡಿಯಿತು. ಗ್ಲಾಸಿನಲ್ಲಿದ್ದ ನೀರು ಸೆಕೆಂಡುಗಳಲ್ಲಿ ಖಾಲಿಯಾಯಿತು. ಹಾವು ನೀರು ಕುಡಿದಾಗ ಅದರ ದವಡೆಗಳೂ ಚಲಿಸುತ್ತವೆ. ಇದನ್ನು ದೃಶ್ಯದಲ್ಲಿ ನೋಡಬಹುದು.
ಗ್ಲಾಸ್‌ನಲ್ಲಿದ್ದ ನೀರನ್ನು ಸೆಕೆಂಡ್‌ಗಳಲ್ಲಿ ಖಾಲಿ ಮಾಡುತ್ತಿದ್ದ ಹಾವು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಹಾವಿನ ನೀರು ಕಡಿಮೆಯಾಗುತ್ತದಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ ಅತಿ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿದೆ. ಇನ್ನೊಂದೆಡೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ.