Uncategorized

ಹಾಲಿನ ಟ್ಯಾಂಕರ್​ ಪಲ್ಟಿ; ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನರು..

ಉತ್ತರಕನ್ನಡ: ಹೆದ್ದಾರಿಯಲ್ಲಿ ಪೆಟ್ರೋಲ್​-ಡೀಸೆಲ್ ಟ್ಯಾಂಕರ್ ಅಥವಾ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್​ಗಳು ಅಪಘಾತಕ್ಕೀಡಾದಾಗ ಜನರು ಅವುಗಳನ್ನು ತುಂಬಿಸಿಕೊಂಡು ಹೋಗಲು ಮುಗಿಬಿದ್ದ ಪ್ರಕರಣಗಳು ಈಗಾಗಲೇ ಸಾಕಷ್ಟು ನಡೆದಿವೆ.ಅಂಥದ್ದೇ ಒಂದು ಪ್ರಕರಣ ಇದೀಗ ಸಂಭವಿಸಿದ್ದು, ಇಲ್ಲಿದ್ದ ಪೆಟ್ರೋಲ್​-ಡೀಸೆಲ್, ಆಲ್ಕೊಹಾಲೂ ಅಲ್ಲ, ಬದಲಿಗೆ ಹಾಲು.

ಹೌದು.. ಹಾಲಿನ ಟ್ಯಾಂಕರ್​ವೊಂದು ರಸ್ತೆಯಲ್ಲಿ ಪಲ್ಟಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ಅರೆಬೈಲ್ ಘಟ್ಟದಲ್ಲಿ ಈ ಅಪಘಾತ ಸಂಭವಿಸಿದ್ದು, ಹಾಲು ರಸ್ತೆಯಲ್ಲಿ ಹೊಳೆಯಂತೆ ಹರಿದಿದೆ.

ವಾಹನದಿಂದ ಚೆಲ್ಲುತ್ತಿದ್ದ ಹಾಲನ್ನು ತೆಗೆದುಕೊಳ್ಳಲು ಜನರು ಬಾಟಲಿ-ಕ್ಯಾನ್​ಗಳನ್ನು ಹಿಡಿದುಕೊಂಡು ಬಂದು ಬಿಟ್ಟಿ ಹಾಲಿಗಾಗಿ ಮುಗಿಬಿದ್ದ ಪ್ರಸಂಗವೂ ನಡೆದಿದೆ. ಹಾಲಿನ ಈ ಟ್ಯಾಂಕರ್​ ಕೊಲ್ಲಾಪುರದಿಂದ ಕೇರಳ ಕಡೆ ತೆರಳುತ್ತಿದ್ದು, ಬ್ರೇಕ್​ ಫೇಲ್ ಆಗಿ ಡಿವೈಡರ್​ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button