ಬೆಂಗಳೂರುಹವಾಮಾನ

ಹವಾಮಾನ ಇಲಾಖೆ ಮುನ್ಸೂಚನೆ : ಬೆಂಗಳೂರಲ್ಲಿ ಇನ್ನೂ ಐದು ದಿನ ಮಳೆ

ಬೆಂಗಳೂರು : ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಆ.6ರಂದು ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯಲ್ಲೊ ಅಲರ್ಟ್‌ ನೀಡಲಾಗಿದೆ. ಐದು ದಿನ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಗುರುವಾರ ಕೂಡ ಇಡೀ ದಿನ ಮಳೆಯಾಗಿದ್ದು, ಯಾವುದೇ ಅನಾಹುತಗಳಾದ ಬಗ್ಗೆ ವರದಿಯಾಗಿಲ್ಲ. ಆದರೆ, ತಗ್ಗು ಪ್ರದೇಶ ಕೆಲವು ರಸ್ತೆಗಳಲ್ಲಿ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಗಿ ಟ್ರಾಫಿಕ್‌ ಜಾಮ್‌ ಆಗಿತ್ತು. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಳೆ ಲೆಕ್ಕಿಸದೆ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.

ಎಲ್ಲೆಲ್ಲಿ ಎಷ್ಟು ಮಳೆ?:
ಯಲಹಂಕ 22 ಮಿ.ಮೀ, ಜಕ್ಕೂರು 21.5 ಮಿ.ಮೀ, ಹೊರಮಾವು 19 ಮಿ.ಮೀ, ಚೊಕ್ಕಸಂದ್ರ 17 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 24 ಮಿ.ಮೀ, ಹೆಗ್ಗನಹಳ್ಳಿ 18 ಮಿ.ಮೀ, ಹಂಪಿನಗರ 18 ಮಿ.ಮೀ, ವಿದ್ಯಾಪೀಠ 17 ಮಿ.ಮೀ, ಹಗದೂರು 32 ಮಿ.ಮೀ, ಎಚ್‌ಎಎಲ್‌ ವಿಮಾನ ನಿಲ್ದಾಣ 24 ಮಿ.ಮೀ, ದೊಮ್ಮಲೂರು 17 ಮಿ.ಮೀ, ಬೊಮ್ಮನಹಳ್ಳಿ 18 ಮಿ.ಮೀ, ಪುಲಿಕೇಶಿನಗರ 18 ಮಿ.ಮೀ, ಅಗ್ರಹಾರ ದಾಸರಹಳ್ಳಿ 19 ಮಿ.ಮೀ, ಕಮ್ಮನಹಳ್ಳಿ 19 ಮಿ.ಮೀ, ಬಾಣಸವಾಡಿ 39 ಮಿ.ಮೀ, ಹೊಯ್ಸಳನಗರ 21 ಮಿ.ಮೀ, ರಾಮಮೂರ್ತಿನಗರ 33 ಮಿ.ಮೀ, ಬಸವನಪುರದಲ್ಲಿ31 ಮಿ.ಮೀ. ಮಳೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button