ಹಳೆ ಮೈಸೂರು, ಹೊಂದಾಣಿಕೆ ರಾಜಕೀಯವಿಲ್ಲ

ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುತ್ತೇವೆ. ಅಪ್ಪ ನಂತರ ಮಗ ಅನ್ನೋ ರಾಜಕಾರಣಕ್ಕೆ ನಮ್ಮಲ್ಲಿ ಅವಕಾಶವಿಲ್ಲ. ಹಳೆ ಮೈಸೂರು ಭಾಗದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ ಎಂದಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇವತ್ತಿನ ರಾಜಕಾರಣಕ್ಕೆ ಎಷ್ಟು ಸಲ್ಲುತ್ತಾರೆ, ಎಷ್ಟು ಪ್ರಸ್ತುತ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮಗೆಲ್ಲ ಹೊಸ ಜವಾಬ್ದಾರಿ ನೀಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಕಳೆದ ಬಾರಿ ಹೆಚ್ಚಿನ ಸೀಟು ಬಾರದ ಕಾರಣ ನಮಗೆ ಬಹುಮತ ಸಿಗಲಿಲ್ಲ. ಹಾಗಾಗಿ, ಯಾವುದೇ ಹೊಂದಾಣಿಕೆ ರಾಜಕೀಯ ಮಾಡದೆ ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವತ್ತ ಗಮನ ಹರಿಸಿದ್ದೇವೆ ಎಂದರು.
ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಾಗವುದು, ಅಪ್ಪ ಆದ್ಮೇಲೆ ಮಗ ಅಂತ ಅನುಕಂಪ ತೋರಿಸಿದ್ದರಿಂದ ಟವೆಲ್ ಹಾಕ್ಕೊಂಡು ರಾಜಕಾರಣವನ್ನು ಬ್ಯುಸಿನೆಸ್ ತರ ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಹಿರಿತನದ ಬಗ್ಗೆ ನಮ್ಮ ಪ್ರಶ್ನೆಯಿಲ್ಲ. ಕುಮಾರಸ್ವಾಮಿ ಇವತ್ತಿನ ರಾಜಕಾರಣಕ್ಕೆ ಎಷ್ಟು ಸಲ್ಲುತ್ತಾರೆ.
ಹೆಚ್‌ಡಿಕೆ ಸತ್ಯ ಕಹಿ, ತಮ್ಮ ಅಸ್ಥಿತ್ವಕ್ಕಾಗಿ ಹೇಳಿಕೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.ರಾಜಕೀಯಕ್ಕೆ ಬರುವುದು ತಮ್ಮ ಉದ್ಧಾರಕ್ಕಾ, ಜನರ ಉದ್ಧಾರಕಾ, ಓಬಿರಾಯನ ಕಾಲದಲ್ಲಿದ್ದೇವಾ ನಾವು, ರಾಮನಗರ, ಚೆನ್ನಪಟ್ಟಣ ಮಾಜಿ ಮುಖ್ಯಮಂತ್ರಿ ಕೊಟ್ಟ ಕ್ಷೇತ್ರ. ಅಭಿವೃದ್ಧಿ ನೋಡಿದರೆ ಮನಸ್ಸಿಗೆ ಬೇಜಾರಾಗುತ್ತದೆ.
ಭವಿಷ್ಯವಿರುವಂತಹ ನಾಡು ಎಂತೆಂತವರ ಕೈಗೋ ಸಿಕ್ಕಿ ಹಾಕಿಕೊಂಡಿತ್ತು. ಅಭಿವೃದ್ಧಿ ಭಾರತಕ್ಕೆ ಬೆಂಗಳೂರಿನ ಮೂಲಕ ಮುನ್ನುಡಿಯನ್ನು ಬಿಜೆಪಿ ಬರೆಯುತ್ತದೆ ಎಂದು ಅವರು ಹೇಳಿದರು.