ರಾಜ್ಯರಾಷ್ಟ್ರಿಯ

ಹರ್ ಘರ್ ತಿರಂಗಾ ಅಭಿಯಾನ : ಧ್ವಜಾರೋಹಣ ಮಾಡುವಾಗ ಈ ನಿಯಮಗಳ ಪಾಲನೆ ಕಡ್ಡಾಯ

ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ರಾಷ್ಟ್ರದಾದ್ಯಂತ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್‌ 13 ರಿಂದ ಆಗಸ್ಟ್‌ 15ರವರಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಿಗೊಳಿಸಲು ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಮೂರು ದಿನಗಳ ಕಾಲ ಎಲ್ಲಾ ಮನೆಗಳಲ್ಲಿ, ಸರ್ಕಾರೇತರ ಸಂಘ-ಸಂಸ್ಥೆಗಳ ಮೇಲೆ ನಿರಂತರವಾಗಿ ರಾಷ್ಟ್ರ ಧ್ವಜವನ್ನು ಹಾರಿಸವುದು ಮತ್ತು ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಆಗಸ್ಟ್‌ 13 ರಿಂದ ಆಗಸ್ಟ್‌ 15ರವರಗೆ ರಾಷ್ಟ್ರಧ್ವಜವನ್ನು ಹಾರಿಸುವುದು.

ಭಾರತದ ಧ್ವಜ ಸಂಹಿತೆಯು, ರಾಷ್ಟ್ರೀಯ ಧ್ವಜ ಅಥವಾ ತ್ರಿವರ್ಣ ಧ್ವಜವನ್ನು ಹಾರಿಸುವುದಕ್ಕೆ ಸಂಬಂಧಿಸಿದ ಒಂದು ನಿಯಮವಾಗಿದೆ. ಇದು ಸಾರ್ವಜನಿಕರು, ಕಚೇರಿಗಳು ಮತ್ತು ಸಂಸ್ಥೆಗಳಿಗೆ ರಾಷ್ಟ್ರಧ್ವಜವನ್ನು ಪ್ರದರ್ಶಿಸಲು ನಿಯಮಗಳನ್ನು ರೂಪಿಸುತ್ತದೆ.

ಭಾರತದ ಧ್ವಜ ಸಂಹಿತೆಯನ್ನು ಮೊದಲು 2022 ರಲ್ಲಿ ಗಣರಾಜ್ಯೋತ್ಸವದಂದು (ಜನವರಿ 26) ಜಾರಿಗೆ ತರಲಾಯಿತು. ಸರ್ಕಾರವು ಇತ್ತೀಚೆಗೆ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ.

ಭಾರತದ ಧ್ವಜ ಸಂಹಿತೆಗೆ ಇತ್ತೀಚಿನ ತಿದ್ದುಪಡಿಯೊಂದಿಗೆ, ಸರ್ಕಾರವು ರಾತ್ರಿಯೂ ಸಹ ಧ್ವಜವನ್ನು ಹಾರಿಸಲು ಅನುಮತಿ ನೀಡಿದೆ. ಈ ಹಿಂದೆ ಪ್ರತಿ ದಿನ ಸಂಜೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಪ್ರತಿ ದಿನ ಬೆಳಗ್ಗೆ ಮತ್ತೆ ಹಾರಿಸಬೇಕಿತ್ತು.

ಭಾರತದ ಧ್ವಜ ಸಂಹಿತೆಯ ಪ್ರಕಾರ, “ಸಾರ್ವಜನಿಕ, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯ ಸದಸ್ಯರಿಗೆ ಎಲ್ಲಾ ದಿನಗಳು ಮತ್ತು ಸಂದರ್ಭಗಳಲ್ಲಿ, ವಿಧ್ಯುಕ್ತವಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ, ಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಸಲಾಗಿದೆ.

“ಭಾರತದ ಧ್ವಜ ಸಂಹಿತೆಯು ರಾಷ್ಟ್ರೀಯ ಧ್ವಜವು ಆಯತಾಕಾರವಾಗಿರಬೇಕು, ಉದ್ದ ಮತ್ತು ಎತ್ತರದ ಅನುಪಾತವು 3:2 ಗೆ ನಿಗದಿಪಡಿಸಲಾಗಿದೆ.ಧ್ವಜವನ್ನು ಯಾವುದೇ ರೀತಿಯ ಅಲಂಕಾರ ಉದ್ದೇಶಗಳಿಗಾಗಿ ಬಳಸಬಾರದು.

ತ್ರಿವರ್ಣ ಧ್ವಜಾರೋಹಣಮಾಡಲು ಪಾಲಿಸಬೇಕಾದ ನಿಯಮಗಳು

ಆಗಸ್ಟ್ 13 ಶನಿವಾರ ಬೆಳಗ್ಗೆ 7:00 ಘಂಟೆಗೆ ಧ್ವಜಾರೋಹಣ ಮಾಡಿ ಆಗಸ್ಟ್ 15 ಸೋಮವಾರ ಸಂಜೆ 5:00 ಘಂಟೆಗೆ ಧ್ವಜವನ್ನು ಇಳಿಸಬೇಕು.

ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಮಾಡಬೇಕು.ಧ್ವಜ ಸ್ಥಂಭ ಮತ್ತು ಧ್ವಜ ನೆರವಾಗಿರಬೇಕು.

ಅದು ಎಡಕ್ಕೆ, ಬಲಕ್ಕೆ , ಹಿಂದಕ್ಕೆ, ಮುಂದಕ್ಕೆ ವಾಲಿರಬಾರದು.ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ, ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರಬಾರದು.

ಗಲಿಜಾದ ಮತ್ತು ಹರಿದ ಧ್ವಜವನ್ನು ಬಳಸಬಾರದು.ಕೇಸರಿ ಬಣ್ಣ ಮೇಲೆ ಇರುವಂತೆ ಧ್ವಜಾರೋಹಣ ಮಾಡಬೇಕು.

ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ, ಘನತೆ ಇರುತ್ತದೆ. ಆಗಸ್ಟ್ 15 ರಂದು ಸಂಜೆ 5 ಘಂಟೆಗೆ ಧ್ವಜವನ್ನು ಇಳಿಸಿದ ನಂತರ, ಅದನ್ನು ಅಶೋಕ ಚಕ್ರ ಮೇಲೆ ಬರುವಂತೆ ಧ್ವಜವನ್ನು ಮಡಿಕೆ ಮಾಡಿ ಸುರಕ್ಷಿತ ಜಾಗದಲ್ಲಿ ಇಡಬೇಕು.

ಭಾರತೀಯ ಸಂವಿಧಾನದ 51A (ಎ) ವಿಧಿಯ ಪ್ರಕಾರ, ಸಂವಿಧಾನವನ್ನು ಪಾಲಿಸುವುದು ಮತ್ತು ಅದರ ಆದರ್ಶಗಳು ಮತ್ತು ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button