
ಮೂವರು ಪಾನಮತ್ತರು ಹಣಕ್ಕಾಗಿ ಒತ್ತಾಯಿಸಿ ಟ್ರಕ್‍ನ ಹೆಡ್‍ಲೈಟ್‍ಗಳನ್ನು ಹೊಡೆದು, ಚಾಲಕರ ಮೇಲೆ ಹಲ್ಲೆ ನಡೆಸಿದ್ದರಿಂದ ಕೋಪಗೊಂಡ ಚಾಲಕನೊಬ್ಬ ಅವರ ಮೇಲೆ ವಾಹನ ಓಡಿಸಿ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ರೆಡ್‍ಹಿಲ್ಸ್‍ನಲ್ಲಿರುವ ಖಾಸಗಿ ಟ್ರಕ್ ಪಾರ್ಕಿಂಗ್ ಯಾರ್ಡ್‍ನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಟ್ರಕ್ ಚಾಲಕ ಕನ್ಹಯ್ಯಾ(35) ಸಿಂಗ್ ಕೊಲೆ ಮಾಡಿರುವ ಚಾಲಕನಾಗಿದ್ದಾನೆ.ಕುಮಾರನ್ (36) ಮತ್ತು ಕಮಲಾ ಕಣ್ಣನ್ (35) ಮತ್ತು ಗಾಯಗೊಂಡ ನವೀನ್ (25) ಹಣಕ್ಕಾಗಿ ಪೀಡಿಸಿ ಪ್ರಾಣ ಕಳೆದುಕೊಂಡವರು.ರಾತ್ರಿ 7.30ರ ಸುಮಾರಿಗೆ ಕನ್ಹಯ್ಯಾ ಸಿಂಗ್ ಮತ್ತು ಕ್ರಿಶ್‍ಕುಮಾರ್ (26) ಟ್ರಕ್ ಚಾಲಕರು ಅಡುಗೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಅವರು ಚಾಲಕರು ಮಾಡಿದ ರೊಟ್ಟಿಗಳನ್ನು ಕಿತ್ತುಕೊಂಡು ಕನ್ಹಯ್ಯಾ ಸಿಂಗ್ ಬಳಿಯಿದ್ದ ಹಣವನ್ನು ನೀಡುವಂತೆ ಒತ್ತಡ ಹೇರಿದ್ದಾರೆ. ಕನ್ಹಯ್ಯಾ ನಿರಾಕರಿಸಿದಾಗ, ಮೂವರು ಗಲಾಟೆ ಮಾಡಿ ಟ್ರಕ್‍ನ ಹೆಡ್‍ಲೈಟ್‍ಗಳನ್ನು ಹಾಕಿ ದಾಂಧಲೆ ನಡೆಸಿದ್ದಾರೆ. ಮೂವರು ಸೇರಿ ಟ್ರಕ್ ಚಾಲಕರನ್ನು ಥಳಿಸಿದ್ದಾರೆ.
ಹಣ ಕೊಡುವವರೆಗೂ ಬಿಡುವುದಿಲ್ಲ ಎಂದು ಟ್ರಕ್‍ನ ಹಿಂದೆಯೇ ಕೂತು ಮೂವರು ವ್ಯಕ್ತಿಗಳು ಮದ್ಯ ಸೇವಿಸುತ್ತಾ ಕುಳಿತಿದ್ದಾರೆ. ಎಷ್ಟೇ ಮನವಿ ಮಾಡಿದರೂ ಪಟ್ಟು ಬಿಡದೆ ಇದ್ದುದ್ದರಿಂದ ಕೋಪಗೊಂಡ ಕನ್ಹಯ್ಯಾ ಟ್ರಕ್‍ನ್ನು ಅವರ ಮೇಲೆ ಹತ್ತಿಸಿದ್ದಾನೆ. ಇದರಿಂದ ಕುಮಾರನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಮಲಾ ಕಣ್ಣನ್ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ನವೀನ್ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರೆಡ್ ಹಿಲ್ಸ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ರ ಅಡಿ ಪ್ರಕರಣ ದಾಖಲಿಸಿಕೊಂಡು ಕನ್ಹಯ್ಯಾ ಸಿಂಗ್ ಮತ್ತು ಕ್ರಿಶ್ ಕುಮಾರ್ ಅವರನ್ನು ಬಂಸಿದ್ದಾರೆ. ಕೋಪಗೊಂಡ ಮೃತರ ಸ್ನೇಹಿತರು, ಸಂಬಂಕರು ಹತ್ತು ಟ್ರಕ್‍ಗಳಿಗೆ ಹಾನಿ ಮಾಡಿದ್ದಾರೆ.