ಅಪರಾಧ

ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಮಗ್ಗುಲಲ್ಲಿ ಸ್ಫೋಟ; ಅನ್ನ ಛತ್ರ, ಹೋಟೆಲ್, ನಾಲ್ಕು ಅಂಗಡಿ ಭಸ್ಮ

ವಿಶ್ವವಿಖ್ಯಾತ ಹಂಪಿಯಲ್ಲಿ ಗುರುವಾರ ರಾತ್ರಿ ಸಿಲಿಂಡರ್ ಸ್ಪೋಟಗೊಂಡು ಅಗ್ನಿ ಅವಘಡ ಜರುಗಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ 100 ಮೀಟರ್ ದೂರದ ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು ಸಮೀಪದ ಅಂಗಡಿಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಹಂಪಿ‌ ಪ್ರವಾಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.ಮೊದಲು ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ಅಂಗಡಿಯಲ್ಲಿದ್ದ ವೃದ್ದೆ ಹಾಗೂ ಸಣ್ಣ ಮಕ್ಕಳ್ಳ ಜೀವಗಳು ಉಳಿದಿದೆ.

ನಂತರ ಪಕ್ಕದಲ್ಲೇ ಇದ್ದ ಮ್ಯಾಂಗೋ ಟ್ರೀ ಹೊಟೇಲ್, ಅನ್ನಪೂರ್ಣೇಶ್ವರಿ ಛತ್ರ ಮತ್ತು ಬಟ್ಟೆ ಅಂಗಡಿ ನಾಲ್ಕು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ಭಾರೀ ಬೆಂಕಿಯಿಂದ ಅಲ್ಲಿದ್ದ ಸಿಲಿಂಡರ್ ಗಳು ಸ್ಪೋಟಗೊಂಡಿವೆ.

ಸಿಲಿಂಡರ್ ಸ್ಪೋಟಕ್ಕೆ ಒಂದು ಕಾರು, 15 ಸೈಕಲ್ ಸೇರಿ ನಾಲ್ಕು ಅಂಗಡಿ, ಹೋಟೆಲ್ ನಲ್ಲಿನ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಬೆಂಕಿಯು ಮುಗಿಲೆತ್ತರಕ್ಕೆ ತನ್ನ ಕೆನ್ನಾಲಿಗೆಯನ್ನು ಚಾಚಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಲು ಹರಸಾಹಸ ಪಡಬೇಕಾಯಿತು.

ಬೆಂಕಿಯನ್ನು ನಂದಿಸಿದ ನಂತರ, ಹೋಟೆಲ್ ನಲ್ಲಿ ಇದ್ದ ಇನ್ನೂ ಮೂರು ಎಲ್ ಪಿಜಿ ಸಿಲಿಂಡರ್ ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಬೆಂಕಿ ಕಾಣಿಸಿಕೊಂಡ ಕೂಡಲೇ ಹೋಟೆಲ್ ನಲ್ಲಿ, ಅಂಗಡಿಗಳಲ್ಲಿ ಮಲಗಿದ್ದ ಕಾರ್ಮಿಕರು ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಪಿ ಐತಿಹಾಸಿಕ, ಧಾರ್ಮಿಕ ಹಾಗೂ ವಿಶ್ವ ಪ್ರಸಿದ್ದಿ ಹೊಂದದ ಸ್ಥಳವಾಗಿದೆ. ಇಲ್ಲಿ ದೇಶವಿದೇಶದ ಪ್ರವಾಸಿಗರು ಬೇಟಿ ನೀಡುತ್ತಾರೆ. ಸ್ಥಳೀಯ ಆಡಳಿತದಿಂದ ಭದ್ರತೆ ಸೇರಿ ಇತರೆ ಸೌಕರ್ಯಗಳನ್ನು ಒದಗಿಸಬೇಕಿದೆ. ಆದ್ದರಿಂದ ಇಂತಹ ಘಟನೆಗಳು ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪ್ರವಾಸಿಗರ ಒತ್ತಾಯಿಸುತ್ತಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button