
ಆನ್ಲೈನ್ ವ್ಯವಹಾರಗಳು ಬಳಕೆದಾರರನ್ನು ಯಾವ್ಯಾವ ರೀತಿ ಮೋಸ, ವಂಚನೆ, ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ ಎಂಬಂತಾಗಿದೆ. ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯೊಬ್ಬರು ತನಗರಿವಿಲ್ಲದೆ 23 ಲಕ್ಷ ರೂ. ಬ್ಯಾಂಕ್ ಸಾಲಗಾರ ಆಗಿದ್ದಾರೆ.
ಇವರ ಅಕೌಂಟ್ಗೆ ಇದ್ದಕ್ಕಿದ್ದಂತೆ ೨೩ ಲಕ್ಷ ರೂ. ಜಮೆಯಾಗಿದೆ. ಐದು ನಿಮಿಷಗಳಲ್ಲಿ 8 ಲಕ್ಷ ರೂ. ಬೇರೊಂದು ಖಾತೆಗೆ ಟ್ರ್ಯಾನ್ಸಾಕ್ಷನ್ ಆಗಿದೆ. ಇದನ್ನು ನೋಡಿ ಗಾಬರಿಯಾದವ್ಯಕ್ತಿ ತಕ್ಷಣವೇ ಅಕೌಂಟ್ ಬ್ಲಾಕ್ ಮಾಡಿ ಅನಾಹುತ ತಪ್ಪಿಸಿಕೊಂಡಿದ್ದಾರೆ.
ಆದರೆ ನಂತರ ತಾವು 23 ಲಕ್ಷ ಸಾಲ ತೀರಿಸಬೇಗಿದೆ ಎಂಬುದು ಅವರಿಗೆ ತಿಳಿಯುತ್ತದೆ. ಈ ಘಟನೆಯನ್ನು ಪೊಲೀಸರು ‘ಸ್ಮಾರ್ಟ್ಫೋನ್ ಮಿರರ್ ಹ್ಯಾಕಿಂಗ್’ ಎಂದು ಹೇಳಿದ್ದಾರೆ.
ಎನಿಡೆಸ್ಕ್ ಅಪ್ಲಿಕೇಶನ್ ಬಳಸುವ ಮೂಲಕ ಒಂದು ಲ್ಯಾಪ್ಟಾಪ್ ಮೂಲಕ ಮತ್ತೊಂದು ಲ್ಯಾಪ್ಟಾಪ್ ಮೂಲಕ ನಿಯಂತ್ರಿಸಬಹುದು. ಇಂಥ ಅಪ್ಲಿಕೇಷನ್ ಸಹಾಯದಿಂದ ಸೈಬರ್ ಕ್ರಿಮಿನಲ್ಗಳು ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡುತ್ತಾರೆ.
ತಾವು ಹ್ಯಾಕ್ ಮಾಡಿದ ಸ್ಮಾರ್ಟ್ಫೋನ್ ಬಳಕೆದಾರ ಆ ಸ್ಮಾರ್ಟ್ಫೋನಿನಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ತಿಳಿಯುತ್ತಾರೆ. ಅವರಿಗೆ ಬ್ಯಾಂಕಿಂಗ್ ಮಾಹಿತಿಗಳೆಲ್ಲವೂ ಸುಲಭವಾಗಿ ಸಿಗುವುದು.
ಈ ವಂಚನೆಯ ಜಾಲಕ್ಕೆ ಬಿದ್ದಿರುವ ವ್ಯಕ್ತಿ ಅಚಾನಕ್ ಆಗಿ ಡೌನ್ಲೋಡ್ ಮಾಡಿದ ಯಾವುದೋ ಒಂದು ಫೈಲ್ ಮೂಲಕ ಇವರ ಸ್ಮಾರ್ಟ್ಫೋನನ್ನು ಹ್ಯಾಕ್ ಮಾಡಲಾಗಿದೆ.
ನಂತರ ಆನ್ಲೈನ್ ಬ್ಯಾಂಕಿಂಗ್ ಮಾಹಿತಿಗಳೆಲ್ಲವನ್ನು ತೆಗೆದುಕೊಂಡಿದ್ದಾರೆ. ಅವರ ಖಾತೆಯಲ್ಲಿ 200 ರೂ. ಮಾತ್ರ ಇತ್ತು.
ಇವರ ಸಂಬಳ ಚೆನ್ನಾಗಿದ್ದುದ್ದರಿಂದ ಇವರಿಗೆ ಇನ್ಸ್ಟಂಟ್ ಲೋನ್ ಆಫರ್ ಇತ್ತು. ಕ್ರಿಮಿನಲ್ಗಳೇ ಆನ್ಲೈನಿನಲ್ಲಿ ಲೋನ್ಗೆ ಅಪ್ಲಿಕೇಷನ್ ಹಾಕಿ ಬರುವ ಓಟಿಪಿ ಎಲ್ಲವನ್ನೂ ಮೇಲ್ ಮುಖಾಂತರವೇ ನಿಯಂತ್ರಿಸಿದ್ದಾರೆ.
ಐದು ನಿಮಿಷಗಳಲ್ಲಿ ಲೋನ್ ಸ್ಯಾಂಕ್ಷನ್ ಆಗಿದೆ. 23 ಲಕ್ಷ ಲೋನ್ ಹಣ ಇವರ ಅಕೌಂಟ್ಗೆ ಜಮೆಯಾದ ತಕ್ಷಣವೇ ಸಂಪೂರ್ಣ ಹಣವನ್ನು ತಮ್ಮ ಅಕೌಂಟ್ಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ವ್ಯಕ್ತಿ ಮುನ್ನೆಚ್ಚರಿಕೆ ವಹಿಸಿದ್ದರಿಂದ 8 ಲಕ್ಷ ರೂ. ಮಾತ್ರ ವಂಚನೆಯಾಗಿದೆ.
ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗುತ್ತಿರುವ ಮೆಸೇಜ್ಗಳನ್ನು ನೋಡಿದ ತಕ್ಷಣವೇ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಇ-ಮೇಲ್ಗಳನ್ನು ತೆರೆದು ನೋಡಿದಾಗ 23 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ಸಂದೇಶಗಳು ಬಂದಿವೆ.
ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ನಿಮ್ಮ ಸ್ಮಾರ್ಟ್ಫೋನ್ ಹ್ಯಾಕ್ ಮಾಡುವ ವೈರಸ್ ಇರುವ ಬಗ್ಗೆ ಸ್ವಲ್ಪವೂ ಅನುಮಾನ ಬರುವುದಿಲ್ಲ. ಇನ್ನು ಈ ವೈರಸ್ಒಮ್ಮೆ ಮೊಬೈಲ್ಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ. ಇದು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣವನ್ನು ದೋಚುತ್ತದೆ.