
ಶಿಕ್ಷಕರ ದಿನಾಚರಣೆಯ ಅಂಗವಾಗಿ 17/09/2022 ರಂದು ಕರ್ನಾಟಕ ಸರ್ಕಾರದ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ನಗರ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶೈಕ್ಷಣಿಕ ಕಾರ್ಯಾಗಾರ, ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸನ್ಮಾನ ಕಾರ್ಯಕ್ರಮ ನಡೆಯಿತು.
ದಿನಾಂಕ: 17-09-2022 ರಂದು ಬೆಳಿಗ್ಗೆ 10-00 ಗಂಟೆಗೆ ‘ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪ’, ಬಸವೇಶ್ವರನಗರ ಇಲ್ಲಿ ನಡೆಯಿತು.
2022-23 ನೇ ಸಾಲಿನ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾದ ಶಿಕ್ಷಕರ ಪಟ್ಟಿಯಲ್ಲಿ ಪ್ರೌಢ ಶಾಲಾ ಶಿಕ್ಷಕರು 5 ಮಂದಿ ಅದರಲ್ಲಿ ಬೇಗೂರಿನ ಸಂತ ತೆರೇಸಾ ಪ್ರೌಢ ಶಾಲೆಯ ಗಣಿತ ಮಾಸ್ಟರ್ ಪ್ರವೀಣ್ ಕುಮಾರ್. ಎಂ ಸಹ ಒಬ್ಬರು.

ಮೊದಲಿಗೆ ಆಯ್ಕೆಯಾದ ಸನ್ಮಾನ ಸ್ವೀಕರಿಸಿದ ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳು ನಮ್ಮ ncibtimesmedia ತಂಡದಿಂದ.

ಸ್ಫೂರ್ತಿದಾಯಕ ಶಿಕ್ಷಕರು ಬೇಗೂರು ಸಂತ ತೆರೇಸಾ ಶಾಲೆಯ ಪ್ರವೀಣ್ ಕುಮಾರ್ ಎಂ (Pk master)ಬೇಗೂರಿನ ಸಂತ ತೆರೇಸಾ ಪ್ರೌಢ ಶಾಲೆಯ ಗಣಿತ ಶಿಕ್ಷಕರು ಹಾಗೂ ಭೌತಶಾಸ್ತ್ರ ವಿಷಯಗಳನ್ನು ಬೋಧಿಸುತ್ತಾರೆ.
ಬನ್ನಿ ಇವರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿಯೋಣ, ಬಳ್ಳಾರಿ ಜಿಲ್ಲೆ ಸಿರಾಗುಪ್ಪ ಎಂಬಲ್ಲಿ ಹುಟ್ಟಿ ಅಮೇರಿಕಾ ವರೆಗೂ ಹೋಗಿ ಹೆಚ್ಚಿನ ಅಭ್ಯಾಸಗಳನ್ನು ಕಲಿತು ತನ್ನ ವಿದ್ಯಾರ್ಥಿಗಳಿಗೆ ಪ್ರೇರಣೆಯಾದ ಪ್ರವೀಣ್ ಕುಮಾರ್ ಸರ್, ಇವರ ತಂದೆ ಬಿ. ಮರಿಯಣ್ಣ ತಾಯಿ ಲೇಟ್ ಗಂಗಮ್ಮ.
ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರಿನ ಶಿವಾಜಿನಗರ ಬಳಿ ಇರುವ ಸಂತ ಜೇವಿಯರ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸುತ್ತಾರೆ,
ನಂತರ ಸಂತ ಅಲಾಶಿಯಸ್ ಜೂನಿಯರ್ ಕಾಲೇಜು, ಬೆಂಗಳೂರು ವಿಜಯ ಕಾಲೇಜ್ ಅಲ್ಲಿB.Sc ಪದವಿ ಪಡೆದು TMAE ಕಾಲೇಜ್ ಆಪ್ ಎಜುಕೇಶನ್ ಹರಪನಹಳ್ಳಿ ಅಂದಿನ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಸಂಗ ಮುಗಿಸಿದರು. M.sc mathematics ಹಾಗೂ M.BA ಅಳಗಪ್ಪ ಎಜುಕೇಶನ್ ಮ್ಯಾನೇಜ್ಮೆಂಟ್ ಅಲ್ಲಿ ಮಾಡಿರುತ್ತಾರೆ.
ವಿವಿಧ ವ್ಯಕ್ತಿತ್ವ ವಿಕಾಸನ, ಕಂಟೆಂಟ್ ರೈಟಿಂಗ್,ತರಬೇತಿ ಪಡೆದು ಇನ್ನು ಹಲವಾರು ವಿಷಯಗಳನ್ನು ಕಲಿತಿದ್ದಾರೆ.ಬೆಂಗಳೂರು ಯೂನಿವರ್ಸಿಟಿ ಯಲ್ಲಿ ಸ್ಪನೀಶ್ ಭಾಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.
ಹೆಚ್ಚಾಗಿ ನಮ್ಮ ಭಾರತ ದೇಶದಿಂದ ಅಮೇರಿಕಾ ದೇಶಕ್ಕೆ ಹೋಗಿ ನಮ್ಮ ಕನ್ನಡಿಗರ ಹಿರಿಮೆಯನ್ನು ಹೆಚ್ಚಿಸಿದ್ದಾರೆ.2014 ರಲ್ಲಿ ಅಮೇರಿಕಾ (U.S.A) ಹೋಗಿ ಈ ಕೆಳಗೆ ನಮೂದಿಸಿದ ಅಭ್ಯಾಸ ಕಲಿತಿರುತ್ತಾರೆ.
ಫುಲ್‌ಬ್ರೆಟ್ ಟೀಚಿಂಗ್ ಎಕ್ಸಲೆನ್ಸ್ ಅಂಡ್ ಅಚೀವ್‌ಮೆಂಟ್ ಪ್ರೋಗ್ರಾಂ (FTEA) ಅನ್ನು US ಡಿಪಾರ್ಟ್ ಮೆಂಟ್ ಆಫ್ ಎಜುಕೇಶನಲ್ ಅಂಡ್ ಕಲ್ಬರಲ್ ಅಫೇರ್ಸ್ ಬ್ಯೂರೋ ಪ್ರಾಯೋಜಿಸಿದೆ. ಇದು ಒಟ್ಟಾರೆ ಪುಲ್‌ಬೈಟ್ ಕಾರ್ಯಕ್ರಮದ ಭಾಗವಾಗಿದೆ, ಸೆನೆಟರ್ ಜೆ. ವಿಲಿಯಂ ಫುಲ್‌ಬ್ರೆಟ್ ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ,
ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳ ಜನರಲ್ಲಿ ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುತ್ತದೆ ವುಲ್‌ಟ್ ಟೀ ಕಾರ್ಯಕ್ರಮವು 62 ದೇಶಗಳ ಸುಮಾರು 168 ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ತಮ್ಮ ವಿಷಯದ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಣತಿಯನ್ನು ಅಭಿವೃದ್ಧಿಪಡಿಸಲು, ಅವರ ಬೋಧನಾ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ನ ಬಗ್ಗೆ ಅವರ ಜ್ಞಾನವನ್ನು ಹೆಚ್ಚಿಸಲು ಅನನ್ಯ ಅವಕಾಶವನ್ನು ಒದಗಿಸುತ್ತದೆ.
ಫುಲ್ ಟ್ TEA ಕಾರ್ಯಕ್ರಮವು US ವಿಶ್ವವಿದ್ಯಾನಿಲಯದಲ್ಲಿ ಆರು ವಾರಗಳ ನಾನ್ ಡಿಗ್ರಿ, ನಾನ್ ಕ್ರೆಡಿಟ್ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತದಿಂದ ಏಳು ಶಿಕ್ಷಕರು ಭಾಗವಹಿಸಿದ್ದರು.
ಇವರು ಶಿಕ್ಷಕರಾಗಿ 30 ವರ್ಷಗಳಾಗಿದೆ.ಇವರು ಶಿಕ್ಷಕರಾಗಿ ಸೇವೆ ಮಾಡಿರುವ ಶಾಲೆಗಳು.ಮಿರಂಡಾ ಶಾಲೆ ಎಚ್. ಎಲ್ ಕ್ರೈಸ್ಟ್ ಶಾಲೆ ಸುದುಗುಂಟೆ ಪಾಳ್ಯಸಂತ ತೆರೇಸಾ ಶಾಲೆ ಬೇಗೂರು ಈಗ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರಿಂದ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಹಲವಾರು ಒಳ್ಳೆ ಸ್ಥಾನದಲ್ಲಿ ಇದ್ದಾರೆ ನಮ್ಮ ಶಿಕ್ಷಕರು ನಮ್ಮ ಹೆಮ್ಮೆ.ಶಿಕ್ಷಕ ತನ್ನ ಜ್ಞಾನ, ತಾಳ್ಮೆ, ಪ್ರೀತಿ ಮತ್ತು ಕಾಳಜಿಯಿಂದ ತನ್ನ ಇಡೀ ಜೀವನಕ್ಕೆ ಬಲವಾದ ಆಕಾರವನ್ನು ನೀಡುವ ವಿದ್ಯಾರ್ಥಿಯ ಜೀವನದಲ್ಲಿ ಅಂತಹ ಪ್ರಮುಖ ವ್ಯಕ್ತಿ.
ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣಿಸಲಾಗಿದೆ ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ.
ಅವರ ಸಮರ್ಪಿತ ಕೆಲಸವನ್ನು ಬೇರೆ ಯಾವುದೇ ಕೆಲಸದೊಂದಿಗೆ ಹೋಲಿಸಲಾಗುವುದಿಲ್ಲ. ಶಿಕ್ಷಕರು ತಮ್ಮ ಎಲ್ಲಾ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವವರು.
ಶಿಕ್ಷಕರು ಎಂದಿಗೂ ಕೆಟ್ಟವರಲ್ಲ, ಅವರ ಬೋಧನಾ ವಿಧಾನ ಮಾತ್ರ ಪರಸ್ಪರ ಭಿನ್ನವಾಗಿರುತ್ತದೆ ಮತ್ತು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಭಿನ್ನ ಚಿತ್ರಣವನ್ನು ಸೃಷ್ಟಿಸುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಸಂತೋಷದಿಂದ ಮತ್ತು ಯಶಸ್ವಿಯಾಗಲು ಮಾತ್ರ ಬಯಸುತ್ತಾರೆ.
ಉತ್ತಮ ಶಿಕ್ಷಕನು ತನ್ನ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗೆ ಅನುಗುಣವಾಗಿ ಕಲಿಸುತ್ತಾರೆ.
ಕೊನೆಯದಾಗಿ ಅವರು ಹೇಳಿದ್ದು ಕಠಿಣ ಶ್ರಮ ಪಡಬೇಕು ಯಾವುದುಕ್ಕು ಬದಲಿ (substitute) ಇಲ್ಲಾ.ಇಷ್ಟೆಲ್ಲಾ ಮಾಡಿರುವ ಅನೇಕರಿಗೆ ಪ್ರೇರಣೆಯಾಗಿರುವ ಈ ನಮ್ಮ ಪ್ರವೀಣ್ ಕುಮಾರ್ ಮಾಸ್ಟರ್ ಗೆ ಗೌರವ ಪೂರ್ವ ಅಭಿನಂದನೆಗಳು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ದಿಂದ ಸಹ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ. ಹಾಗೂ 2022-2023 ಉತ್ತಮ ಶಿಕ್ಷಕ ಎಂದು ಸನ್ಮಾನ ಸ್ವೀಕರಿಸಿದ್ದಾರೆ.ನಮ್ಮ ncibtimesmedia ತಂಡದಿಂದ ಅಭಿನಂದನೆಗಳು ಸರ್ ನಿಮಗೆ.
ಧನ್ಯವಾದಗಳು ಬೇಗೂರಿನ ಸಂತ ತೆರೇಸಾ ಶಾಲೆಯ ವ್ಯವಸ್ಥಾಪಕರು ಫಾದರ್ ಆರೋಗ್ಯಸ್ವಾಮಿ ಸೇಬಾಸ್ಟಿನ್ ಹಾಗೂ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ವನಜಾ ಮೇಡಂ ಹಾಗೂ ಸಂತ ತೆರೇಸಾ ಶಾಲೆಯ ಎಲ್ಲಾ ಸಹ ಶಿಕ್ಷಕ ವರ್ಗದವರಿಗೂ ಹಾಗೂ ncibtimesmedia ತಂಡಕ್ಕೆ ಪ್ರವೀಣ್ ಕುಮಾರ್ ಅವರಿಂದ.