ಸ್ನೇಹಿತೆ ಮನೆಯಲ್ಲಿ ಚಿನ್ನ ಕದ್ದಿದ್ದ ಖತರ್ನಾಕ್ ಮಹಿಳೆ ಬಂಧನ..

ಸ್ನೇಹಿತೆಯ ಮನೆಗೆ ಚಿನ್ನದ ಆಭರಣಗಳ ಡಿಸೈನ್ ನೋಡುವ ನೆಪದಲ್ಲಿ ಬಂದು ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಮಹಿಳೆಯನ್ನು ಬಂಧಿಸಿದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸುಮಾರು 9.84ಲಕ್ಷ ಬೆಲೆಯ ಚಿನ್ನ ಹಾಗು ಬೆಳ್ಳಿ ಆಭರಣಗಳನ್ನು ವಶಪಡಿಸಿ ಕೊಂಡಿದ್ದಾರೆ.
ಕೆಂಗೇರಿಯ ಗೀತಾ ಬಂಧಿತ ಆರೋಪಿ. ಈಕೆ ವಿದ್ಯಾರಣ್ಯಪುರ ಗುರುದರ್ಶನ ಬಡಾವಣೆಯ ನಿವಾಸಿ ಲಕ್ಷ್ಮೀ.ಎ ಅವರ ಮನೆಗೆ ಕಳ್ಳತನ ಮಾಡುವ ಉದ್ದೇಶದಿಂದ ಬಂದು, ಆ ದಿನ ರಾತ್ರಿ ಅವರ ಮನೆಯಲ್ಲಿಯೇ ಉಳಿದುಕೊಂಡು ಒಡವೆಗಳ ಡಿಸೈನ್ ನೋಡುವ ನೆಪದಲ್ಲಿ ಸುಮಾರು 8 ರಿಂದ 10 ಲಕ್ಷ ರೂ.
ಬೆಲೆ ಬಾಳುವ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಬಗ್ಗೆ ಲಕ್ಷ್ಮೀ ಅವರು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೆಂಗೇರಿಯ ಗೀತಾ ಎಂಬಾಕೆಯನ್ನು ಬಂಧಿಸಿ, ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 9,84,700 ರೂ. ಬೆಲೆ ಬಾಳುವ 216 ಗ್ರಾಂ ತೂಕದ ಚಿನ್ನಾ ಆಭರಣ ಮತ್ತು 231.350 ಗ್ರಾಂ ತೂಕದ ಬೆಳ್ಳಿಯ ಕಾಲ್ಗೆಜ್ಜೆಯನ್ನು ವಶಪಡಿಸಿಕೊಂಡಿದ್ದಾರೆ.ಯಲಹಂಕ ಉಪ-ವಿಭಾಗದ ಎ.ಸಿ.ಪಿ ಮಂಜುನಾಥ್ ಆರ್.
ಅವರ ಸಲಹೆ ಮತ್ತು ಸೂಚನೆಯಂತೆ ವಿದ್ಯಾರಣ್ಯಪುರ ಪೊಲೀಸ್ ಇನ್ಸ್‍ಪೆಕ್ಟರ್ ಸುಂದರ್ ನೇತೃತ್ವದಲ್ಲಿ ಪಿಎಸ್‍ಐ ಪ್ರಭು ಕೆ.ಎಲï. ಮತ್ತು ಪ್ರೊಬೇಶನರಿ ಪಿಎಸ್‍ಐ ನಾಗವ್ವ ಹೊನವಾಡ, ಅಪರಾದ ಪತ್ತೆ ವಿಭಾಗದ ಶಿವಪ್ರಸಾದ್ ಹೆಚ್.ಸಿ , ನಂದೀಶ್ ಹೆಚ್.ಸಿ, ಸುನೀತ ಹೆಚï.ಸಿ 8502, ಪ್ರಸಾದ್.ಟಿ.ಸಿ, ಕು.ಸುಧಾ, ಕು.ಶಕುಂತಲ, ಕು.
ಸಿದ್ದವ್ವ ಬಡೇಗೆ, ಅಶ್ವಿನಿ ಮತ್ತು ಸಿಡಿಆರ್ ಸೆಲ್ ಸಿಬ್ಬಂದಿ ಬಾಬು ಹೆಚ್.ಸಿ., ರವಿಚಂದ್ರನ್ ಹೆಚ್.ಸಿ. ಅವರ ತಂಡ ಪ್ರಕರಣ ಬೇದಿಸಿರುವುದಕ್ಕೆ ಮೇಲಾಕಾರಿಗಳು ಶ್ಲಾಘಸಿದ್ದಾರೆ.