
ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಧರ್ಮದರ್ಶಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣವೊಂದು ತಡವಾಗಿ ಬಹಿರಂಗಗೊಂಡಿದೆ.
2022ರ ಡಿಸೆಂಬರ್ 22 ರಂದು ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣ ಎಂಬಾತ ಹೇಮಾವತಿ ಎಂಬ ಮಹಿಳೆಗೆ ಹೀಗೆ ಹಿಂಸೆ ನೀಡಿದ್ದಾನೆ.
ಅಮೃತಹಳ್ಳಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮಹಿಳೆಯ ಜುಟ್ಟು ಹಿಡಿದು ಎಳೆದೊಯ್ದು, ಕಬ್ಬಿಣದ ರಾಡ್ ನಿಂದ ಆರೋಪಿ ಹಲ್ಲೆ ನಡೆಸಿದ್ದಾನೆ.
ದೇವರ ದರ್ಶನಕ್ಕೆ ತೆರಳಿದ್ದ ಹೇಮಾವತಿಗೆ ಸ್ನಾನ ಮಾಡದೇ, ಶುದ್ಧಿ ಇಲ್ಲದೆ ದೇವಸ್ಥಾನಕ್ಕೆ ಬಂದಿದ್ದೀಯಾ ಎಂದು ಕೂದಲು ಹಿಡಿದು ಹೊರಗೆ ಎಳೆದೊಯ್ದಿದ್ದಾನೆ. ಕಬ್ಬಿಣದ ರಾಡ್ ನಿಂದ ಆಕೆಗೆ ಹೊಡೆದಿದ್ದಾನೆ.
ಯಾರಿಗಾದರೂ ಹೇಳಿದ್ರೆ ಸರಿಯಿರಲ್ಲ ಎಂದು ಜೀವ ಬೆದರಿಕೆ ಕೂಡ ಹಾಕಿದ್ದಾನೆ ಎನ್ನಲಾಗಿದೆ.ಮುನಿಕೃಷ್ಣ ಹಲ್ಲೆ ನಡೆಸುವಾಗ ದೇವಸ್ಥಾನದ ಅರ್ಚಕರು ತಡೆಯುವ ಪ್ರಯತ್ನ ಮಾಡಿದರೂ, ಮತ್ತೆ ಮುಂದೆ ನುಗ್ಗಿ ಹಲ್ಲೆ ನಡೆಸಿದ್ದಾನೆ.
ಈತನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಹಿಳೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ 354 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಮುನಿಕೃಷ್ಣನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.