ಸ್ಕೂಟರ್ ಅಪಘಾತ ಪತ್ನಿ ಸಾವು ಪತಿ ಗಂಭೀರ

ಅಪರಿಚಿತ ವಾಹನ ಆಕ್ಟೀವ್ ಹೋಂಡಾ ಸ್ಕೂಟರ್ ಗೆ ಡಿಕ್ಕಿ ಹೊಡೆದು ಹಿಂದೆ ಕುಳಿತಿದ್ದ ಪತ್ನಿ ಸಾವನ್ನಪ್ಪಿದರೆ,ಪತಿ ಗಾಯಗೊಂಡಿರುವ ದಾರುಣ ಘಟನೆ ಕಲ್ಯಾಣನಗರದ ಜಂಕ್ಷನ್ ಬಳಿ ನಡೆದಿದೆ.
ಶ್ವೇತಾ (೨೩) ಸಾವನ್ನಪ್ಪಿದರೆ,ಅವರ ಪತಿ ಆನಂದ್ (೨೮ ) ಅವರು ಗಂಭೀರವಾಗಿ ಗಾಯಗೊಂಡು ಹೆಚ್.ಬಿ. ಆರ್ ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಆನಂದ್ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೆ ಇವರಿಬ್ಬರ ವಿವಾಹವಾಗಿದ್ದು, ನೆನ್ನೆ ರಾತ್ರಿ ಸಿನೆಮಾ ನೋಡಿಕೊಂಡು ವಾಪಾಸಾಗುವ ವೇಳೆ ಘಟನೆ ನಡೆದಿದೆ.
ಶ್ವೇತಾಳ ಶವ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.ಬೈಕ್? ಕಳ್ಳತನ:ರಾಮಮೂರ್ತಿ ನಗರದ ಗ್ರೀನ್ ವುಡ್ ಲೇಔಟ್?ನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮೋಹನ್ ಪ್ರಸಾದ್ ಅವರ ಬೈಕ್ ಕಳವು ಮಾಡಿದ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.