ಸೋಮವಾರ ಫುಟ್ಬಾಲ್ ದಂತಕಥೆ ಪೀಲೆ ಅಂತ್ಯ ಸಂಸ್ಕಾರ

ಬ್ರೆಜಿಲ್‍ನ ಫುಟ್ಬಾಲ್ ದಂತಕಥೆ ಪೀಲೆ ಅವರ ಅಂತ್ಯಕ್ರಿಯೆ ಬರುವ ಸೋಮವಾರ ಸ್ಯಾಂಟೋಸ್ ನಗರದಲ್ಲಿ ನೆರವೇರಲಿದೆ. ಮೂರು ಬಾರಿ ವಿಶ್ವಕಪ್ ವಿಜೇತ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಹಾಗೂ ಫುಟ್ಬಾಲ್ ದಂತಕಥೆ ಎಂದು ಕರೆಯಲಾಗುತ್ತಿದ್ದ 82 ವರ್ಷದ ಪೀಲೆ ಅವರು ನಿನ್ನೆ ನಿಧನರಾಗಿದ್ದರು.ಹಲವಾರು ವರ್ಷಗಳಿಂದ ಕ್ಯಾನ್ಸರ್ ರೋಗದೊಂದಿಗೆ ಸೆಣಸುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಹು ಅಂಗಾಂಗಳ ವೈಫಲ್ಯದಿಂದಾಗಿ ಪೀಲೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಾವೋ ಪಾಲೋದಲ್ಲಿರುವ ಅಲ್ಬರ್ಟ್ ಐನ್‍ಸ್ಟೈನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.ಪೀಲೆ ಫುಟ್ಬಾಲ್ ಆಟದಲ್ಲಿ ಮೋಡಿ ಮಾಡಿದ್ದ ವಿಲಾ ಬೆಲ್ಮಿರೋದ ಉರ್ಬಾನೋ ಕ್ಯಾಲ್ಡೆರಾ ಕ್ರೀಡಾಂಗಣದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.
ಸಂಸ್ಕಾರಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಮೆರವಣಿಗೆ ಮಾಡಲಾಗುವುದು ಎಂದು ಸ್ಯಾಂಟೋಸ್ ಫುಟ್ಬಾಲ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.ಸ್ಯಾಂಟೋಸ್ ಅಥವಾ ರಾಷ್ಟ್ರೀಯ ತಂಡದೊಂದಿಗೆ ವಿದೇಶ ಪ್ರವಾಸ ಮಾಡುವಾಗ ಅವರನ್ನು ರಾಜಮನೆತನದವರಂತೆ ಸ್ವಾಗತಿಸಲಾಗುತ್ತಿತ್ತು.
ಅವರಿ 1969ರಲ್ಲಿ ನೈಜೀರಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದ ರಕ್ತಸಿಕ್ತ ಯುದ್ಧಕ್ಕೆ 48 ಗಂಟೆಗಳ ಕಾಲ ವಿರಾಮ ಘೋಷಿಸಲಾಗಿತ್ತು.ಗಾಯಕರಾಗಿ, ಚಲನಚಿತ್ರ ನಟರಾಗಿ ಹಾಗೂ ಕ್ರೀಡಾ ಮಂತ್ರಿಯಾಗಿಯೂ ಪೀಲೆ ಅವರು ಸೇವೆ ಸಲ್ಲಿಸಿದ್ದರು.
ಆದರೆ ಅವರು ಬ್ರೆಜಿಲ್‍ನಲ್ಲಿನ ವರ್ಣಭೇದ ನೀತಿಯ ಬಗ್ಗೆ ಮೌನವಾಗಿರುವುದಕ್ಕಾಗಿ ಕೆಲವೊಮ್ಮೆ ಟೀಕೆಗಳನ್ನು ಎದುರಿಸಬೇಕಾಗಿತ್ತು.