ರಾಜ್ಯ

ಸೋಂಕು ತುಸು ಇಳಿಕೆ

ದೇಶದಲ್ಲಿ ಹಲವು ದಿನಗಳ ಬಳಿಕ ಕೊರೊನಾ ಸೋಂಕು ಸಂಖ್ಯೆ ಕಡಿಮೆ ದಾಖಲಾಗಿದ್ದು ಚೇತರಿಕೆ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಹೊಸದಾಗಿ ೭,೫೯೧ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸೋಂಕಿನಿಂದ ೯,೨೦೬ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಲಾಗಿದೆ.ಸೋಂಕು ಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೮೪,೯೩೧ಕ್ಕೆ ಕುಸಿದಿದೆ.

ಅಲ್ಲದೆ ದಿನದ ಪಾಸಿಟಿವಿಟಿ ಪ್ರಮಾಣ ಶೇ. ೪.೫೮ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೨,೬೯ ರಷ್ಟು ಇದೆ. ಜೊತೆಗೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೧೯ ರಷ್ಟು ಇದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.ಹೊಸದಾಗಿ ಚೇತರಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ೪,೩೮,೦೨,೯೯೩ಕ್ಕೆ ಹೆಚ್ಚಳವಾಗಿದೆ.

ದೇಶದಲ್ಲಿ ನಿನ್ನೆಯಿಂದ ಇಲ್ಲಿಯ ತನಕ ೨೪,೭೦,೩೩೦ ಡೋಸ್ ಲಸಿಕೆ ನೀಡಲಾಗಿದ್ದು ಇಲ್ಲಿಯ ವರೆಗೂ ೨೧೧.೯೧ ಕೋಟಿ ಡೋಸ್ ಲಸಿಕ ನೀಡಲಾಗಿದೆ. ದೇಶದಲ್ಲಿ ಹೊಸದಾಗಿ ೧,೬೫,೭೫೧ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೂ ಒಟ್ಟಾರೆ ೮೮.೫೨ ಕೋಟಿ ಜನರಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕು ಸಂಖ್ಯೆ ನಿತ್ಯ ಇಳಿಕೆ ಹಿನ್ನೆಲೆಯಲ್ಲಿ ಚೇತರಿಕೆಯ ಒಟ್ಟು ಪ್ರಮಾಣ ಶೇ.೯೮,೬೨ಕ್ಕೆ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button