ಅಂತಾರಾಷ್ಟ್ರೀಯ

ಸೆರೆಬ್ರಲ್ ಅನ್ಯೂರಿಸಂನಿಂದ ಬಳಲುತ್ತಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​; ಏನಿದು ಖಾಯಿಲೆ?

ಬೀಜಿಂಗ್ : ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅಪಾಯಕಾರಿ ಮೆದುಳಿನ ಕಾಯಿಲೆಯಿಂದ (Brain Disease) ಬಳಲುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕ್ಸಿ ಜಿನ್‌ಪಿಂಗ್ ಅವರು ಪ್ರಸ್ತುತ ಮೆದುಳಿನ ಗಂಭೀರ ಕಾಯಿಲೆಯಾದ ಸೆರೆಬ್ರಲ್ ಅನ್ಯೂರಿಸಮ್‌ನಿಂದ (Cerebral Aneurysm) ಬಳಲುತ್ತಿದ್ದು, 2021ರ ಕೊನೆಯಲ್ಲಿ ಆಸ್ಪತ್ರೆಗೆ (Hospital) ದಾಖಲಾಗಬೇಕಾಯಿತು ಎಂದು ವರದಿಗಳು ತಿಳಿಸಿವೆ. ಕಾಯಿಲೆಯಿಂದ ಗುಣಮುಖರಾಗಲು ವೈದ್ಯರು ಶಸ್ತ್ರಚಿಕಿತ್ಸೆಗೆ (Surgery) ಸಲಹೆ ನೀಡಿದ್ದರು ಆದರೆ ಜಿನ್‌ಪಿಂಗ್ ಶಸ್ತ್ರಚಿಕಿತ್ಸೆಗೆ ಹೋಗುವುದಕ್ಕಿಂತ ಹೆಚ್ಚಾಗಿ ಚೀನಾದ ಸಾಂಪ್ರದಾಯಿಕ ಔಷಧಿಗಳ (Traditional Medicines) ಮೂಲಕ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.


ವಿದೇಶಿ ನಾಯಕರನ್ನು ಭೇಟಿಯಾಗಲು ನಿರಾಕರಣೆ
ವರದಿಯ ಪ್ರಕಾರ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಳೆದ ಹಲವಾರು ತಿಂಗಳುಗಳಿಂದ ಇದರಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ, ಅವರನ್ನು ಡಿಸೆಂಬರ್ 2021ರಲ್ಲಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಜಿನ್‌ಪಿಂಗ್ ಆರೋಗ್ಯದ ಬಗ್ಗೆ ಈಗಾಗಲೇ ಊಹಾಪೋಹಗಳಿದ್ದು, ಅನಾರೋಗ್ಯದ ಸುದ್ದಿ ಹಲವು ಬಾರಿ ಮುನ್ನೆಲೆಗೆ ಬಂದಿದೆ. ಬೀಜಿಂಗ್‌ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನಿಂದ ಹಿಡಿದು ಯಾವುದೇ ವಿದೇಶಿ ನಾಯಕರನ್ನು ಭೇಟಿಯಾಗಲು ಅಧ್ಯಕ್ಷರು ನಿರಾಕರಿಸಿದಾಗ ಊಹಾಪೋಹಗಳು ಹೆಚ್ಚು ಗಟ್ಟಿಯಾದವು.


ಅನಾರೋಗ್ಯದ ಲಕ್ಷಣ ಇತ್ತು
ಮಾರ್ಚ್ 2019ರಲ್ಲಿ, ಇಟಲಿಗೆ ಕ್ಸಿ ಅವರ ಭೇಟಿಯ ಸಮಯದಲ್ಲಿ, ಅವರ ನಡಿಗೆಯು ಗಮನಾರ್ಹವಾದ ಕುಂಟುವಿಕೆಯೊಂದಿಗೆ ನಡೆನುಡಿಯು ಅಸಾಮಾನ್ಯವಾಗಿರುವುದು ಕಂಡುಬಂದಿತ್ತು. ನಂತರ ಫ್ರಾನ್ಸ್‌ನ ಪ್ರವಾಸದ ಸಮಯದಲ್ಲೂ ಅವರ ನಡವಳಿಕೆ ಸಹಜವಾಗಿರಲಿಲ್ಲ. ಅಂತೆಯೇ, 2020ರ ಅಕ್ಟೋಬರ್‌ನಲ್ಲಿ ಶೆನ್‌ಜೆನ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ, ಅವರ ನೋಟ, ನಿಧಾನವಾದ ಮಾತು ಮತ್ತು ಕೆಮ್ಮಿನ ಲಕ್ಷಣಗಳು ಮತ್ತೆ ಅವರ ಅನಾರೋಗ್ಯದ ಬಗೆಗೆ ಪುಷ್ಠಿ ನೀಡಿತು.

Related Articles

Leave a Reply

Your email address will not be published. Required fields are marked *

Back to top button