ರಾಜ್ಯ
ಸುಮನಹಳ್ಳಿ ಮೇಲ್ಸೇತುವೆ ಕಳಪೆ ಕಾಮಗಾರಿ ಬಯಲು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಳಪೆ ಕಾಮಗಾರಿ ಬಯಲಾಗಿದ್ದು, ಸುಮನಹಳ್ಳಿ ಮೇಲ್ಸೇತುವೆ ಮೇಲಿನ ಸ್ಲ್ಯಾಬ್ ಪುಡಿಪುಡಿ ಆಗಿದ್ದು, ಆತಂಕದಲ್ಲಿ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.
ನೆಲಕಾಣಿಸುವ ಮಟ್ಟಕ್ಕೆ ಕಾಂಕ್ರೀಟ್ ಸ್ಲ್ಯಾಬ್ ಕಿತ್ತುಹೋಗಿದ್ದು, ನಾಗರಬಾವಿಯಿಂದ ಗೋರಗುಂಟೆಪಾಳ್ಯಕ್ಕೆ ಸಂಪರ್ಕಿಸುವ ರಸ್ತೆಯ ಮೇಲ್ಸೇತುವೆ ಇದಾಗಿದೆ.
ಮೇಲಿಂದ ನೆಲಕ್ಕೆ ಸೇತುವೆ ಮೇಲಿನ ಸಿಮೆಂಟ್, ಕಲ್ಲುಗಳು ಉರುಳುತ್ತಿವೆ.ಗುಂಡಿಬಿದ್ದ ಜಾಗದಲ್ಲಿ ನೆಪಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದು, ನಗರಾಭಿವೃದ್ಧಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.ಇದಲ್ಲದೆ, ೨೦೧೯ ರಲ್ಲಿಯೂ ಸ್ಲ್ಯಾಬ್ ಕುಸಿದು ಬಿದ್ದಿತ್ತು.
ಆ ಸಮಯದಲ್ಲಿ ಆರು ತಿಂಗಳು ಬಂದ್ ಆಗಿದ್ದ ಈ ಸುಮನಹಳ್ಳಿ ಮೇಲ್ಸೇತುವೆ. ಸ್ಲ್ಯಾಬ್ ಬಿದ್ದ ಪಕ್ಕದ ರಸ್ತೆಯಲ್ಲೇ ಪ್ರಧಾನಿ ನರೇಂದ್ರ ಮೋದಿಗಾಗಿ ಗುಣಮಟ್ಟದ ಡಾಂಬರೀಕರಣ ಮಾಡಲಾಗಿತ್ತು.