ಸುಪ್ರೀಂ ನಿಯಮ ಪಾಲಿಸದವರಿಗೆ ಗುಂಡಿಕ್ಕುವ ಹೇಳಿಕೆಗೆ ಈಗಲೂ ಬದ್ಧ : ಮುತಾಲಿಕ್
Sri Rama Sene leader Pramod Muthalik

ಸುಪ್ರೀಂಕೋರ್ಟ್ ನಿಯಮ ಪಾಲಿಸದೆ ಇರುವವರ ಮೇಲೆ ಗುಂಡಿಟ್ಟು ಹೊಡಿಯೋ ಹೇಳಿಕೆಗೆ ಈಗಲೂ ಬದ್ಧ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪುನರುಚ್ಚಾರ ಮಾಡಿದ್ದಾರೆ. ಕೇಶ್ವಾಪೂರ ಮಧುರಾ ಕಾಲೋನಿಯಲ್ಲಿರುವ ಜಗದೀಶ್ ಮನೆ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡೋಕೆ ಆಗಿಲ್ಲಾ ಅಂದ್ರೆ ರಾಜಿನಾಮೆ ಕೊಡಿ. ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ ಯಾರು ಕಾನೂನು ಪಾಲನೆ ಮಾಡಲು ಅವರಿಗೆ ಗುಂಡ್ಲಪೇಟೆ ಗತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಮ್ಮಂತಹ ಸಂಘಟನೆಗಳ ಶ್ರಮದಿಂದಲೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕೊಡಲೆಂದೇ ಇವತ್ತು ಹೋರಾಟ ಮಾಡ್ತಿದ್ದೇವೆ. ಧ್ವನಿವರ್ಧಕ ವಿಚಾರದಲ್ಲಿ ಸುಪ್ರಿಂಕೋರ್ಟ್ ಆದೇಶ ನೀಡಿ 15 ವರ್ಷಗಳಾಗಿದೆ. ಆದರೆ ಸುಪ್ರೀಂಕೋರ್ಟ್ ಆದೇಶ ಇನ್ನೂ ಜಾರಿಯಾಗ್ತಿಲ್ಲ. ನೀವು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮನೆಗಳ ಮುಂದೆಯೇ ಭಜನೆ ಆರಂಭಿಸುತ್ತೇವೆ ಎಂದರು.
ಬಿಜೆಪಿ ಶಾಸಕರು ಮತ್ತು ಅಧ್ಯಕ್ಷರ ಮನೆ ಮುಂದೆಯೇ ಮೈಕ್ ಇಟ್ಟುಕೊಂಡು ಭಜನೆ ನಡೆಸುತ್ತೇವೆ. ಬರೀ ಹಿಂದೂಗಳ ವೋಟ್ ತೆಗೆದುಕೊಳ್ಳುವುದು ಮಾತ್ರ ಅಲ್ಲ .ಹಿಂದೂಗಳ ಸಮಸ್ಯೆಯನ್ನು ಅರಿತು ಕೊಳ್ಳಬೇಕು ಯೋಗಿ ಆದಿತ್ಯನಾಥನ ರೀತಿಯಲ್ಲಿ ಬಸವರಾಜ ಬೊಮ್ಮಾಯಿಯವರು ಗಟ್ಟಿಯಾಗಿ ನಿಲ್ಲಬೇಕು. ಅದರ ಬದಲಿಗೆ ಇದೇ ರೀತಿಯ ನಾಟಕ ಮಾಡಿದ್ರೆ ಸುಮ್ಮನೆ ಇರುವುದಿಲ್ಲ. ಕಣ್ಣೀರು ಒರೆಸುವ ತಂತ್ರಗಾರಿಕೆ ಬಿಡಬೇಕು ಎಂದು ಕಿಡಿಕಾರಿದರು.
ನಿಮ್ಮ ಕೈಲಿ ಆಗದೇ ಇದ್ದಲ್ಲಿ ರಾಜೀನಾಮೆ ಕೊಡಿ ನನಗೆ ಅಕಾರ ಕೊಡಿ 24 ಗಂಟೆಯಲ್ಲಿ ಅದನ್ನು ಮಾಡಿ ತೋರಿಸುತ್ತೇನೆ. ಪಾಲಿಸದೆ ಇದ್ದವರ ಮೇಲೆ ಗುಂಡು ಹಾರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ ಮನೆ ಮುಂದೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಭಟನೆ ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆಜ್ಞಾಯನ್ನು ದಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಜಗದೀಶ ಶೆಟ್ಟರ ಮನೆ ಮುಂದೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಭಟನೆ ನಡೆಸಿದರು.
ಘೋಷಣೆ ಕೂಗುವ ಮೂಲಕ ಕಾರ್ಯಕರ್ತರ ಜೊತೆಗೆ ಆಗಮಿಸಿದ ಶ್ರೀರಾಮಸೇನೆ ಸಂಸ್ಥಾಪನಾಧ್ಯಕ್ಷ ಪ್ರಮೋದ ಮುತಾಲಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹತ್ತಾರು ಕಾರ್ಯಕರ್ತರೊಂದಿಗೆ ಸೇರಿ ಹುಬ್ಬಳ್ಳಿಯ ಮಧುರಾ ಕಾಲೊನಿ ಯಲ್ಲಿರುವ ಮಾಜಿ ಸಿಎಂ ಜಗದೀಶ ಶೆಟ್ಟರ ನಿವಾಸಕ್ಕೆ ಆಗಮಿಸಿದ ಪ್ರತಿಭಟನಾಕಾರರು ಶೆಟ್ಟರ ನಿವಾಸದೆದುರು ಕುಳಿತು ಪ್ರತಿಭಟನೆ ನಡೆಸಿದರು. ಸುಪ್ರೀಂ ಕೋರ್ಟ್ ಆಜ್ಞಾಯನ್ನ ಕ್ಕರಿಸುತ್ತಿರುವ ಸರ್ಕಾರ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅನೀಕೃತ ಲೌಡ ಸ್ಪೀಕರ್ ತೆರವಿಗೆ 15ದಿನದ ಗಡುವು ನೀಡಿದ್ದರು.