ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಕಡ್ಡಾಯ: ಬೆಂಗಳೂರು ಸ್ವಚ್ಛತೆ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕಮಿಟಿಗೆ

ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕಮಿಟಿಯು ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, 198 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ.
ಕಸ ವಿಲೇವಾರಿ ಸಂಬಂಧ ಈ ಟೆಂಡರ್ ಕರೆಯಲಾಗುತ್ತದೆ.ಇಷ್ಟು ದಿನ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿತ್ತು.
ಆದರೆ ಇನ್ನುಮುಂದೆ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕಮಿಟಿಯಿಂದ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತದೆ. ಇದರ ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ಬ್ಯಾನ್ ಮಾಡಲು ತೀರ್ಮಾನಿಸಲಾಗಿದೆ ಎಂದು ವಿಶೇಷ ಕಮಿಷನರ್ ಹರೀಶ್ ಕುಮಾರ್ ಹೇಳಿದ್ದಾರೆ.
ಇನ್ನು ನಗರದಲ್ಲಿ ಬಾಯಿತೆರೆದು ನಿಂತಿರುವ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಬಿಬಿಎಂಪಿ ವಿಫಲವಾಗಿದೆ. ರಸ್ತೆ ಗುಂಡಿ ಮುಚ್ಚಲು ಡೆಡ್‌ಲೈನ್ ನೀಡಲಾಗಿತ್ತು.
ಆದರೆ ಆ ವಿಚಾರದಲ್ಲಿ ಡೆಡ್ ಲೈನ್ ಮೀರಿರುವ ಪಾಲಿಕೆ ಮಳೆ ನೆಪ ಹೇಳುತ್ತಿದೆ.
ಇಲ್ಲಿಯವರೆಗೆ 9,482 ರಸ್ತೆಗುಂಡಿಗಳನ್ನ ಮುಚ್ಚಲಾಗಿದ್ದು, ಇನ್ನೂ 2020 ಗುಂಡಿಗಳು ಬಾಕಿ ಇವೆ.ನಗರದಲ್ಲಿ ಮಾಸ್ಕ್ ಕಡ್ಡಾಯ: ಇನ್ನು ನಗರದಲ್ಲಿ ನಾಲ್ಕನೇ ಅಲೆ ಮುನ್ಸೂಚನೆ ಇದ್ದು, 19,000 ಬದಲು 20ಸಾವಿರಕ್ಕೆ ಕೋವಿಡ್ ಟೆಸ್ಟ್ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಇನ್ನು ಇಂದಿನಿಂದ ಮಾಸ್ಕ್‌ನ್ನು ಕಡ್ಡಾಯಗೊಳಿಸಿ ಪಾಲಿಕೆ ಆದೇಶ ನೀಡಿದೆ. ಮಾರ್ಷಲ್ಸ್ ಮೂಲಕ ಕಡ್ಡಾಯ ಮಾಡಲು ನಿರ್ಧಾರ ಮಾಡಲಾಗಿದೆ.