ಅಪರಾಧ
ಸಿಲಿಕಾನ್ ಸಿಟಿಯಲ್ಲಿ ಗನ್ ಹಿಡಿದು ಬೈಕ್ ನಲ್ಲಿ ಓಡಾಡಿದ ಪುಂಡರು

ಬೆಂಗಳೂರು: ನಗರದಲ್ಲಿ ಲಾಂಗ್ ಹಿಡಿದು ರಾಬರಿ ಮಾಡುವ ಪುಂಡರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾಲೆ ಇದೆ. ಈ ಮಧ್ಯೆ ಪುಂಡರ ಗುಂಪೊಂದು ಗನ್ ಹಿಡಿದು ಬೈಕ್ ನಲ್ಲಿ ಶೋ ಕೊಟ್ಟಿದ್ದಾರೆ.
ನಗರದಲ್ಲಿ ಗನ್ ಹಿಡಿದು ಬೈಕ್ ರೈಡಿಂಗ್ ಮಾಡಿದ ಪುಂಡರ ಫೋಟೋ ತೆಗೆದು ಬೆಂಗಳೂರು ಸಿಟಿ ಪೊಲೀಸ್ ಪೇಜ್ ಗೆ ಪೋಸ್ಟ್ ಮಾಡಿ ಅಲ್ಕೇಶ್ ಕರ್ಮಕರ್ ಎಂಬುವವರು ಪೋಸ್ಟ್ ಮಾಡಿ ದೂರು ನೀಡಿದ್ದಾರೆ.
ಪುಂಡನೊಬ್ಬ ಬನ್ನೇರುಘಟ್ಟ ರಸ್ತೆ ಮಾರ್ಬಲ್ ರೋಡ್ ಬಳಿ ಗನ್ ಹಿಡಿದು ಬೈಕ್ ನಲ್ಲಿ ತೆರಳುತ್ತಿರುವುದಾಗಿ ಸಮಯ ಸ್ಥಳದ ಮಾಹಿತಿ ನೀಡಿ ಎಂದು ಆಡುಗೋಡಿ ಪೊಲೀಸರು ರೀಪೋಸ್ಟ್ ಮಾಡಿದ್ದಾರೆ. ಸದ್ಯ ಸಾರ್ವಜನಿಕವಾಗಿ ಗನ್ ಹಿಡಿದು ಓಡಾಡುತ್ತಿರುವ ವ್ಯಕ್ತಿಗಾಗಿ ಪೊಲೀಸ್ರು ಹುಡುಕಾಟ ನಡೆಸ್ತಿದ್ದಾರೆ.