ಸಿನಿಮಾ ನಟ ನಾಸರ್‌ಗೆ ಶೂಟಿಂಗ್ ವೇಳೆ ಗಾಯ; ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಾಹುಬಲಿ’ ಸಿನಿಮಾ ಖ್ಯಾತಿಯ ನಟ ನಾಸರ್ ಅವರು ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಹೈದರಾಬಾದ್‌ನಲ್ಲಿ ಸಿನಿಮಾ ಶೂಟಿಂಗ್‌ವೊಂದರಲ್ಲಿ ನಾಸರ್ ಭಾಗಿಯಾಗಿದ್ದರು.
ತೆಲಂಗಾಣ ಪೊಲೀಸ್ ಅಕಾಡೆಮಿ’ ಸಿನಿಮಾ ಶೂಟಿಂಗ್ ದೃಶ್ಯವೊಂದರಲ್ಲಿ ಮೆಟ್ಟಿಲು ಮೇಲಿಂದ ನಾಸರ್ ಬಿದ್ದಿದ್ದಾರೆ. ಅವರ ಎಡ ಭಾಗ ಕಣ್ಣಿಗೆ ಪೆಟ್ಟಾಗಿದೆ. ತಕ್ಷಣ ಹತ್ತಿರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿ, ಮೈನರ್ ಇಂಜುರಿ, ಹೆದರಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ.
64 ವರ್ಷದ ನಾಸರ್ ಅವರು ನಟ, ನಿರ್ದೇಶಕ,ನಿರ್ಮಾಪಕ, ಕಂಠದಾನ ಕಲಾವಿದ, ಗಾಯಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಯೂ ಹೌದು.
1985ರಿಂದ ಸಾಕಷ್ಟು ಸಿನಿಮಾಗಳಲ್ಲಿ ನಾಸರ್ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.