ರಾಜಕೀಯ
ಸಿದ್ಧರಾಮಯ್ಯಗೆ ಧಮ್ ಇದ್ದರೇ ಬಾದಾಮಿಯಿಂದ ಇಲ್ಲವೇ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿ- ನಳೀನ್ ಕುಮಾರ್ ಕಟೀಲ್ ಸವಾಲು

ಸಿದ್ಧರಾಮಯ್ಯಗೆ ಧಮ್ ಇದ್ದರೇ ಬಾದಾಮಿಯಿಂದ ಇಲ್ಲವೇ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲು ಹಾಕಿದರು.ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು.
ಸಿದ್ಧರಾಮಯ್ಯಗೆ ಕ್ಷೇತ್ರದ ಭಯ ಶುರುವಾಗಿದೆ. ಸಿದ್ಧರಾಮಯ್ಯ 5 ವರ್ಷ ಸಿಎಂ ಆಗಿದ್ದರು. ಅವರಿಗೆ ಕಾಂಗ್ರೆಸ್ ಬೆಂಗಾವಲಾಗಿತ್ತು. ಆದ್ರೂ ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಆಗಲಿಲ್ಲ.
ಈ ಭಾರಿ ಮತ್ತೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಸ್ಥಿತಿಯಲ್ಲಿ ಇಲ್ಲ. ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಇವರಿಗೆ ಬೇರೆಯವರ ಯೋಗ್ಯತೆ ಬಗ್ಗೆ ಮಾತನಾಡುವ ಬಗ್ಗೆ ಹಕ್ಕಿದೆಯಾ…? ಎಂದು ಕಿಡಿಕಾರಿದರು.ಸಿದ್ಧರಾಮಣ್ಣ, ರಾಹುಲ್ ಹೋದ ಕಡೆಯೆಲ್ಲಾ ಕಾಂಗ್ರೆಸ್ ಸೋಲುತ್ತದೆ .
ರಾಜ್ಯದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದೆ ಎಂದು ನಳೀನ್ ಕುಮಾರ್ ಕಟೀಲ್ ನುಡಿದರು.