ರಾಜಕೀಯ

ಸಿದ್ದು ಕಚ್ಚೆಹರುಕ:ಹೇಳಿಕೆ ರವಿ ಸಮರ್ಥನೆ

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕಚ್ಚೆ ಹರುಕ ಎಂಬ ತಮ್ಮ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದು, ನನ್ನನ್ನು ಲೂಟಿ ರವಿ ಎಂದು ಕರೆದಿದ್ದಾರಲ್ಲಾ ಅದು ಸರಿನಾ ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಸಬದ್ಧವಾಗಿ ಸಿಟಿನಾ ಲೂಟಿ ಎನ್ನುವುದಾದರೂ, ಸಿದ್ಧುನ ಪೆದ್ದ ಅನ್ನಬಹುದು. ಸಿಟಿನ ಲೂಟಿ ಅನ್ನಬೇಕಾದರೆ ಇವರನ್ನು ಏನೆಂದು ಕರೆಯಬೇಕು ನಾನು ಏನು ಹೇಳಬೇಕೋ ಅದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ ಎಂದರು.

ಈ ಬಗ್ಗೆ ಹೆಚ್ಚಿನ ವಿಷಯ ಬೇಕು ಎಂದರೆ ಹೆಚ್. ವಿಶ್ವನಾಥ್ ಬರುತ್ತಾರೆ ಅವರನ್ನು ಕೇಳಿ. ಸಿದ್ಧರಾಮಯ್ಯ ಹಾಗೂ ವಿಶ್ವನಾಥ್ ಅವರ ರಕ್ತದ ಗುಂಪು ಒಂದೇ. ಸಮಾಜವಾದಿಗಳ ಮಜವಾದಿತನ ನೋಡುತ್ತಿದ್ದೇನೆ. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿಹಾಕಲು ಸಾಧ್ಯವಿಲ್ಲ ಎಂದರು.ನಾನು ಸಿದ್ಧರಾಮಯ್ಯನವರ ಬಗ್ಗೆ ಹೇಳಿದ ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದೇನೆ.

ಸಿದ್ಧರಾಮಯ್ಯ ಏನೂ ಪ್ರತಿಕ್ರಿಯೇ ಕೊಡುತ್ತಾರೆ ಎನ್ನುವುದನ್ನು ನೋಡೋಣ ಎಂದರು.ಸಿದ್ಧರಾಮಯ್ಯ ಅವರ ಬಗ್ಗೆ ನಾನು ಮಾಡಿರುವ ಆರೋಪವನ್ನು ಇಲ್ಲ ಎಂದು ಹೇಳಿಲ್ಲ. ಉತ್ತರ ಕೊಡುವವರು ಏನು ಕೊಡುತ್ತಾರೆ ನೋಡೋಣ. ಸತ್ಯಹರಿಶ್ಚಂದ್ರ ಅವರ ಮೊಮ್ಮಕ್ಕಳಾ ಎಂದು ಸಿದ್ಧರಾಮಯ್ಯ ಟೇಬಲ್ ಗುದ್ದಿ ಕೇಳುತ್ತಿದ್ದರು. ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಹಾಗಾಗಿ ನಾನು ಅವರ ಬಗ್ಗೆ ಮಾತನಾಡಿದ್ದೇನೆ ಎಂದರು.

ಅರ್ಕಾವತಿ ಬಡಾವಣೆಯ ರೀಡು ಹಗರಣದ ಬಗ್ಗೆ ಕೆಂಪೆಣ್ಣನರ ಆಯೋಗ ಸತ್ಯಾಸತ್ಯತೆಯನ್ನು ಹೊರ ತರಲು ರಚನೆ ಮಾಡಿದ್ದು, ಟಿಎ-ಡಿಎ ತೆಗೆದುಕೊಳ್ಳಲು ಆಯೋಗ ರಚನೆ ಮಾಡಿದ್ದಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button