ರಾಜ್ಯ
ಸಿದ್ದರಾಮೋತ್ಸವ ಆಚರಿಸಿಕೊಳ್ಳುತ್ತಿರುವ ದಾವಣಗೆರೆಯಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ನಾಗರೀಕರನ್ನು ಹೈರಾಣಾಗಿಸಿದೆ

ಸಿದ್ದರಾಮೋತ್ಸವ ಆಚರಿಸಿಕೊಳ್ಳುತ್ತಿರುವ ದಾವಣಗೆರೆಯಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ನಾಗರೀಕರನ್ನು ಹೈರಾಣಾಗಿಸಿದೆ. ಒಂದೆಡೆ ಮಳೆ, ಮೋಡದ ವಾತಾವರಣ, ಇನ್ನೊಂದೆಡೆ ಕಾರ್ಯಕ್ರಮಕ್ಕೆಆಗಮಿಸುತ್ತಿರುವ ಸಿದ್ದು ಅಭಿಮಾನಿಗಳ ದಂಡು ಎಲ್ಲೆಲ್ಲೂ ಸಂಚಾರ, ವಾಹನ ದಟ್ಟಣೆ ಕಂಡುಬರುತ್ತಿದೆ.
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬರೋಬ್ಬರಿ 15 ಕಿಲೋಮೀಟರ್ ವಾಹನ ದಟ್ಟಣೆ ಕಾಣಿಸಿಕೊಂಡಿತ್ತು. ಈ ನಡುವೆ ಟ್ರಾಫಿಕ್ ಜಾಮ್ ನಿಂದ ಸಂಕಷ್ಟಕ್ಕೊಳಗಾದ ಸಿದ್ದು ಅಭಿಮಾನಿಗಳು ವೇದಿಕೆಯಿಂದ ಸುಮಾರು 4-5 ಕಿಲೋ ಮೀಟರ್ ದೂರದಲ್ಲಿ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲೇ ಕಾರ್ಯಕ್ರಮ ನಡೆಯುವ ಸ್ಥಳದತ್ತ ಆಗಮಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಲು ರಾಜ್ಯದ ವಿವಿಧೆಡೆಗಳಿಂದ 8,000 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅಗಮಿಸುವವರಿಗೆ ಉಪಾಹಾರದ ವ್ಯವಸ್ಥೆಯಾಗಿ 150 ಕೌಂಟರ್‌ಗಳಲ್ಲಿ ಬಿಸಿಬೇಳೆ ಬಾತ್ ನೀಡಲಾಗುತ್ತಿದೆ.