ಸಿಎಂ ಕುರ್ಚಿಯಲ್ಲಿ ಕುಳಿತ ಶಿಂಧೆ ಪುತ್ರ

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಸಂಸದ ಶ್ರೀಕಾಂತ್ ಶಿಂಧೆ, ಮುಖ್ಯಮಂತ್ರಿ ಅವರ ಕುರ್ಚಿಯಲ್ಲಿ ಕುಳಿತುಕೊಂಡ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಯಾರು ಎನ್ನುವ ಅನುಮಾನ ಕಾಡತೊಡಗಿದೆ ಎಂದು ಕಾಂಗ್ರೆಸ್, ಶೀವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಲೇವಡಿ ಮಾಡಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಮುಖ್ಯಮಂತ್ರಿ ಪುತ್ರನ ನಡೆ ನೋಡಿ “ಸೂಪರ್ ಸಿಎಂ” ಎಂದು ಅಣಕವಾಡಿವೆ.
ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಕೂಡ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿರುವುದರಿಂದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಗ್ಗೆ ಸಹಾನುಭೂತಿ ಇದೆ ಎಂದು ಕುಟುಕಿದ್ದಾರೆ.
ಸಿಎಂ ಕುರ್ಚಿಯ ಬಗ್ಗೆ ತಮಾಷೆ ಮಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಗ್ಗೆ ನನ್ನ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.“ಆದಿತ್ಯ ಠಾಕ್ರೆ ಅವರು ಮಂತ್ರಿಯಾಗಿದ್ದರೂ ಮುಖ್ಯಮತ್ರಿ ಕುರ್ಚಿಯ ಮೇಲೆ ಕುಳಿತಿರಲಿಲ್ಲ, ಆದರೆ ಏಕನಾಥ್ ಶಿಂಧೆ ಅವರ ಮಗ ಮಂತ್ರಿಯೂ ಅಲ್ಲ, ಶಾಸಕನೂ ಅಲ್ಲ” “ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಗ್ಗೆ ನನ್ನ ಸಹಾನುಭೂತಿ, ಕುರ್ಚಿಯಿಂದ ಮತ್ತು ಅವರೇ ಅಧಿಕಾರದಲ್ಲಿರಬೇಕೆಂಬ ಹಸಿವಿನಿಂದ ಇದ್ದವರಿಗೆ ಈ ಪೋಟೋ ನೋಡಿ ಏನು ಹೇಳುತ್ತಾರೆ ಎಂದು ಕೆಣಕಿದ್ದಾರೆ.
ಎನ್‌ಸಿಪಿ ವಕ್ತಾರ ರವಿಕಾಂತ್ ವರ್ಪೆ ಟ್ವೀಟ್ ಮಾಡಿ, ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋದ ಮುಂದೆ ಶ್ರೀಕಾಂತ್ ಕುರ್ಚಿಯ ಮೇಲೆ ಕುಳಿತಿರುವ ಚಿತ್ರದ ಕೆಳಗೆ ಇರಿಸಲಾಗಿರುವ ಫಲಕದಲ್ಲಿ ಮುಖ್ಯಮಂತ್ರಿ- ‘ಮಹಾರಾಷ್ಟ್ರ ಸರ್ಕಾರ’ ಎಂದು ಬರೆಯಲಾಗಿದೆ ಎನ್ನುವುದನ್ನು ಉಲ್ಲೇಖಿಸಿ ಸೂಪರ್ ಸಿಎಂ ಎಂದಿದ್ದು “ಇದು ಯಾವ ರೀತಿಯ ರಾಜಧರ್ಮ ಎಂದು ಪ್ರಶ್ನಿಸಿದ್ದಾರೆ.
ಜನರ ಭೇಟಿ ಬಳಕೆಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಕ್ರಮವನ್ನು ಸಂಸದ ಹಾಗು ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಸಮರ್ಥಿಸಿಕೊಂಡಿದ್ದಾರೆ.ತಮ್ಮ ನಿವಾಸದಿಂದ ನಡೆಸುವ ಮುಖ್ಯಮಂತ್ರಿಗಳ ವರ್ಚುವಲ್ ಸಭೆಗಳ ಕಾರಣದಿಂದ ಮುಖ್ಯಮಂತ್ರಿ ಫಲಕ ತರಲಾಗಿದೆ.
ಹಿಂದಿನ ಮುಖ್ಯಮಂತ್ರಿಗಳು ಒಂದೇ ಸ್ಥಳದಲ್ಲಿ ಕೂರುವುದಕ್ಕಿಂತ ಭಿನ್ನವಾಗಿ ನನ್ನ ತಂದೆ ದಿನಕ್ಕೆ ೧೮ ರಿಂದ ೨೦ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ನನ್ನ ತಂದೆ ಯಾವಾಗಲೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವುದರಿಂದ “ಮುಖ್ಯಮಂತ್ರಿ ಅವರ ಕಚೇರಿಯನ್ನು ಜನರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತೇವೆ ಎಂದಿದ್ದಾರೆ.