ಸಿಎಂ ಕನಸು ಕಾಣುತ್ತಿರುವ ಸಿದ್ದು ಬಿಎಸ್‌ವೈ ಟೀಕೆ

ಮತ್ತೆ ಮುಖ್ಯ ಮಂತ್ರಿ ಆಗುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ ಅವರ ಆಸೆ ಕೈಗೂಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ಇಂದು ವಿಜಯನಗರ ಜಿಲ್ಲೆ ಹಡಗಲಿಯಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಹಿನ್ನಲೆಯಲ್ಲಿ ಹಿರೆಹಡಗಲಿ ಗ್ರಾಮದ ಹನುಮಂತವ್ವ ಎಂಬ ದಲಿತ ಮಹಿಇಳೆಯ ಮನೆಯಲ್ಲಿ ಉಪಹಾರ ಸೇವನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಳೆದ ಎರಡು ದಿನಗಳಿಂದ ಜನ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಯವರು. ಯಡಿಯೂರಪ್ಪ ಅವರನ್ನು ಮಂದಿಟ್ಟುಕೊಂಡು ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು.
ಸಿದ್ದರಾಮಯ್ಯ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಆದರೆ ಅದೆಲ್ಲ ಆಗಲ್ಲ. ನಾವೇಲ್ಲಾ ಒಂದಾಗಿದ್ದೇವೆ, ಎಲ್ಲರೂ ತಂಡಗಳಾಗಿ ಕೆಲಸ ಮಾಡುತ್ತಿದ್ದೇವೆಂದರು.ಮೂರು ಲಕ್ಷ ರೂ:ಉಪಹಾರ ನೀಡಿದ ಹಿರೆ ಹಡಗಲಿಯ ಹನುಮವ್ವ ಅವರಿಗೆ ಸೂಕ್ತ ಆಶ್ರಯ ಇಲ್ಲದ ಕಾರಣ ಅವರಿಗೆ ಮೂರು ಲಕ್ಷ ಹಣ ನೀಡುವಂತೆ ಬೊಮ್ಮಯಿ ಅವರಿಗೆ ಯಡಿಯೂರಪ್ಪ ಸೂಚಿಸಿದರು.
ಸಿಎಂ ಒಪ್ಪಿಕೊಂಡರು.ಕಮಲಾಪುರದ ದಲಿತರ ಮನೆಯಲ್ಲಿ ಮಂಡಾಳು ವಗ್ಗರಣೆ ಮಿರ್ಚಿ ಸವಿ ಸವಿದಿದ್ದ ಸಿಎಂ ತಂಡ ಇಂದುಹನುಮಂತವ್ವ ಅವರ ಮನೆಯಲ್ಲಿ ಇಡ್ಲಿ ವಡೆ ಸವಿದರು. ಸಚಿವ ಗೋವಿಂದ ಕಾರಜೋಳ. ಆನಂದಸಿಂಗ್. ಶಶಿಕಲಾ ಜೊಲ್ಲೆ ಇದ್ದರು.