ಜೀವನಶೈಲಿ

ಸಾಸಿವೆ ಸೊಪ್ಪಿನ ಬಗ್ಗೆ ನಿಮಗೆ ಇದುವರೆಗೂ ಗೊತ್ತಿಲ್ಲದ ಮಾಹಿತಿ ಇದು!

ನಮ್ಮಲ್ಲಿ ಹಲವಾರು ಹಣ್ಣು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯ ಪ್ರಭಾವ ಗಳನ್ನೇ ಕೊಡುತ್ತವೆ. ಸಮಯಕ್ಕೆ ತಕ್ಕಂತೆ ಆರೋಗ್ಯದ ಲಾಭಗಳನ್ನು ಇವುಗಳಿಂದ ನಿರೀಕ್ಷೆ ಮಾಡಬಹುದು. ಇದರ ಜೊತೆಗೆ ಹಸಿರು ಎಲೆ ತರಕಾರಿಗಳು ಕೂಡ ಅಷ್ಟೇ ಪ್ರಯೋಜನಕಾರಿ.

ಉದಾಹರಣೆಗೆ ಮೂಲಂಗಿ ಸೊಪ್ಪು, ಎಲೆಕೋಸಿನ ಮೇಲ್ಭಾಗದ ಎಲೆಗಳು, ಬೀಟ್ರೂಟ್ ಸೊಪ್ಪು ಹೀಗೆ ಬೇಕಾದಷ್ಟು ಇವೆ. ಯಾವುದರಿಂದಲೂ ನಮಗೆ ಅಡ್ಡ ಪರಿಣಾಮಗಳು ಅಷ್ಟಾಗಿ ಇರುವುದಿಲ್ಲ. ಏಕೆಂದರೆ ಇವೆಲ್ಲವೂ ನಮಗೆ ನಿಸರ್ಗದಿಂದ ಸಿಗುವ ಆಹಾರ ಪದಾರ್ಥಗಳು.

ಅದೇ ತರಹ ಸಾಸಿವೆ ಸೊಪ್ಪು ಕೂಡ. ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಹೆಚ್ಚು ನೋಡಲು ಸಿಗುತ್ತದೆ. ರಾಗಿ ಹೊಲಗಳಲ್ಲಿ ಇದು ಕಾಮನ್. ಇದರ ಆರೋಗ್ಯ ಪ್ರಯೋಜನಗಳನ್ನು ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ಈ ಕೆಳಗಿನಂತೆ ತಿಳಿಸಿಕೊಟ್ಟಿದ್ದಾರೆ.ಸಾಸಿವೆ ಸೊಪ್ಪು ಸೇವನೆ ಮಾಡುವುದರಿಂದ ಹೃದಯ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ.

ಇದಕ್ಕೆ ಪ್ರಮುಖ ಕಾರಣ ಎಂದರೆ ಇದರಲ್ಲಿ ವಿಟಮಿನ್ ಕೆ ಹೆಚ್ಚಾಗಿದೆ.ಇದರಿಂದ ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ ಮತ್ತು ಮೂಳೆಗಳು ಗಟ್ಟಿಯಾಗುತ್ತವೆ. ಮುಖ್ಯವಾಗಿ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ. ವಿಟಮಿನ್ ಕೆ ಹೆಚ್ಚಾಗಿರುವ ಸಾಸವೆ ಸೊಪ್ಪು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದಿಲ್ಲ.

ಸಾಸಿವೆ ಸೊಪ್ಪಿನಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಇರಲಿದ್ದು, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಇದರಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.ಇವುಗಳು ದೇಹದ ಜೀವಕೋಶಗಳನ್ನು ಡಿಎನ್ಎ ಹಾನಿಕಾರಕ ಪ್ರಭಾವಗಳಿಂದ ಕಾಪಾಡುವುದು ಮಾತ್ರವಲ್ಲದೆ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ ರೂಪುಗೊಳ್ಳದಂತೆ ತಡೆಯುತ್ತವೆ.

ಹೀಗಾಗಿ ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆಯಿಂದ ಪಾರಾಗಲು ಈಗಿನಿಂದಲೇ ಆಗಾಗ ಸಾಸಿವೆ ಸೊಪ್ಪು ಯಾವುದಾದರೂ ಒಂದು ರೂಪದಲ್ಲಿ ತಿನ್ನುವುದು ಒಳ್ಳೆಯದು.ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಸಾಸವೆ ಸೊಪ್ಪು, ತನ್ನಲ್ಲಿ ಬೀಟ್ ಕ್ಯಾರೋಟಿನ್ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದ್ದು, ಹೃದಯ ರಕ್ತನಾಳದ ಕಾಯಿಲೆಗಳು ಮನುಷ್ಯನಿಗೆ ಬರೆದಂತೆ ನೋಡಿ ಕೊಳ್ಳುತ್ತವೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ನಿಮಗೆ ಸಿಗುವಂತೆ ಮಾಡುತ್ತದೆ..ಮೊದಲೇ ಹೇಳಿದಂತೆ ಸಾಸಿವೆ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿರುವ ಕಾರಣ ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು.

ಇವುಗಳಲ್ಲಿ ಕಣ್ಣಿನ ಆರೋಗ್ಯ ಲಾಭಗಳು ಕೂಡ ಒಂದು ಎಂದು ಹೇಳಬಹುದು.ಇದರಿಂದ ವಯಸ್ಸಾದ ನಂತರದಲ್ಲಿ ದೃಷ್ಟಿ ದೋಷ, ಕಣ್ಣಿನ ಪೊರೆ ಇತ್ಯಾದಿ ಸಮಸ್ಯೆಗಳಿಂದ ಪಾರಾಗಲು ಅನುಕೂಲ ವಾಗುತ್ತದೆ.

ಸಾಸಿವೆ ಸೊಪ್ಪಿನ ಈ ವಿಚಾರವನ್ನು ಸಂಶೋಧನೆ ಬಹಿರಂಗ ಪಡಿಸಿದೆ ಎಂದು ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ತಿಳಿಸಿಕೊಟ್ಟಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button