ಸಾವೊಂದೇ ಕಟ್ಟ ಕಡೆಯ ಆಯ್ಕೆ ಅದು ನೂರು ಪ್ರತಿಶತ ಸಂಭವಿಸುತ್ತದೆ” ಆಹಾರ ಕೊರತೆಯ ಬಗ್ಗೆ ಶ್ರೀಲಂಕಾ ಎಚ್ಚರಿಕೆ

ದ್ವೀಪ ರಾಷ್ಟ್ರ (Island nation) ಶ್ರೀಲಂಕಾ (Sri Lanka) ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿನೊಂದಿಗೆ (The financial crisis) ಹೋರಾಡುತ್ತಿದ್ದು, ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ಅಗತ್ಯ ವಸ್ತುಗಳ (Essential material) ಬೆಲೆ (Price) ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ (Rice), ಹಾಲಿನ ಪುಡಿ (Milk Powder), ಬೇಳೆಕಾಳು (Pulse), ಎಲ್ಪಿಜಿ (LPG), ಸಕ್ಕರೆ (Sugar) ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. ಆರ್ಥಿಕ ಪರಿಸ್ಥಿತಿ ಜೊತೆಗೆ ವಿದ್ಯುತ್, ಇಂಧನ, ಅನಿಲ, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆಯೂ ಕೆಗೆಟಕುವ ಯಾವುದೇ ಲಕ್ಷಣಗಳನ್ನು ತೋರುತ್ತಿಲ್ಲ.
ಆಹಾರ ಕೊರತೆ ಎದುರಿಸುತ್ತಿರುವ ನೆರೆ ರಾಷ್ಟ್ರ
ಅಡುಗೆ ಪದಾರ್ಥಗಳ ಬೆಲೆ ಏರಿಕೆ ಜೊತೆಗೆ ಸಿಲಿಂಡರ್ ಬೆಲೆ 2,675 ರೂಪಾಯಿಗಳಿಂದ ಸುಮಾರು 5,000 ರೂಪಾಯಿಗಳಿಗೆ ($ 14) ಏರಿದೆ. ಹೀಗಾಗಿ ತೀವ್ರ ಪ್ರಮಾಣದ ಆಹಾರ ಕೊರತೆ ಎದುರಿಸುತ್ತಿರುವ ನೆರೆ ರಾಷ್ಟ್ರ ನಮಗೆ ಸಾಯುವುದೊಂದೆ ಆಯ್ಕೆ ಎಂದು ಹೇಳಿದೆ. ಆಹಾರದ ಕೊರತೆಯ ಬಗ್ಗೆ ಶ್ರೀಲಂಕಾದ ಪ್ರಧಾನಿ ಎಚ್ಚರಿಸಿದ್ದಾರೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರವು ಮುಂದಿನ ಋತುವಿನೊಳಗೆ ಸಾಕಷ್ಟು ಗೊಬ್ಬರವನ್ನು ಖರೀದಿಸಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸುವ ನಿರ್ಧಾರದ ಮೂಲಕ ಇಳುವರಿಯನ್ನು ತೀವ್ರವಾಗಿ ಕಡಿತಗೊಳಿಸಿದರು ಮತ್ತು ಸರ್ಕಾರವು ನಿಷೇಧವನ್ನು ಹಿಂತೆಗೆದುಕೊಂಡಿದ್ದರೂ, ಯಾವುದೇ ಗಣನೀಯ ಆಮದುಗಳು ಇನ್ನೂ ನಡೆದಿಲ್ಲ.
“ಈ ಯಲಾ (ಮೇ-ಆಗಸ್ಟ್) ಹಂಗಾಮಿಗೆ ರಸಗೊಬ್ಬರವನ್ನು ಪಡೆಯಲು ಸಮಯವಿಲ್ಲದಿದ್ದರೂ, ಮಹಾ (ಸೆಪ್ಟೆಂಬರ್-ಮಾರ್ಚ್) ಹಂಗಾಮಿಗೆ ಸಾಕಷ್ಟು ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇಂಧನದ ಹೆಚ್ಚಿನ ಸಬ್ಸಿಡಿ ದೇಶೀಯ ಬೆಲೆಗಳು ಮತ್ತು ರಾಸಾಯನಿಕ ಗೊಬ್ಬರಗಳ ಆಮದನ್ನು ನಿಷೇಧಿಸುವ ನಿರ್ಧಾರವು ದೇಶದಲ್ಲಿ ಕೃಷಿ ವಲಯವನ್ನು ಜರ್ಜರಿತಗೊಳಿಸಿದೆ.