ರಾಜ್ಯ
ಸಾವಿನಲ್ಲೂ ಒಂದಾದ ದಂಪತಿ

ಹುಬ್ಬಳ್ಳಿ: ಸಾವಿನಲ್ಲಿಯೂ ವೃದ್ಧ ದಂಪತಿ ಒಂದಾದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ನಡೆದಿದೆ.ಶಿವಪುತ್ರಪ್ಪ ನೆಲಗುಡ್ಡ (90), ಬಸಮ್ಮ (86) ಸಾವಿನಲ್ಲೂ ಒಂದಾದ ದಂಪತಿ. ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ನಿಧನರಾಗಿದ್ದಾರೆ.
ಈ ದುಃಖದಲ್ಲಿದ್ದ ಬಸಮ್ಮಗೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ. ಹಠಾತ್ ಹೃದಯಾಘಾತಕ್ಕೆ ಬಸಮ್ಮ ಕೂಡ ಸಾವನ್ನಪ್ಪಿದ್ದಾರೆ.ಒಂದೇ ದಿನ ಇಬ್ಬರು ಹಿರಿಯ ಜೀವವನ್ನ ಕಳೆದುಕೊಂಡು ಮರುಗಿದ ಕುಟುಂಬಸ್ಥರು, ದಂಪತಿ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.