ಸಾರ್ವಜನಿಕರ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಬೇಡ..
Mass prayers public places not allowed

ಸಾರ್ವಜನಿಕರ ಸ್ಥಳಗಳಲ್ಲಿ ಮುಸಲ್ಮಾನ್ ಬಾಂದವರ ಸಾಮೂ ಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಇಸ್ಲಾಂ ಧರ್ಮದವರ ಹಬ್ಬ ಹರಿದಿನಗಳಲ್ಲಿ ಮುಸಲ್ಮಾನ್ ಬಾಂಧವರು ರಸ್ತೆಗಳಲ್ಲಿ ಸಾಮೂಹಿಕ ಪ್ರಾರ್ಥನೆನಡೆಸುವುದು ಮಾಮೂಲಾಗಿತ್ತು.ರಂಜಾನ್, ಬಕ್ರಿದ್ ಸಂದರ್ಭಗಳಲ್ಲಿ ಮುಸಲ್ಮಾನರು ಗೋರಿಪಾಳ್ಯ, ಚಾಮರಾಜಪೇಟೆ, ಬಿಟಿಎಂ ಬಡಾವಣೆ, ಗುರಪ್ಪನಪಾಳ್ಯ, ಟ್ಯಾನಿ ರೋಡ್, ಯಾರಬ್‍ನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಮುಂದಿನ ತಿಂಗಳು 10 ರಂದು ಬಕ್ರಿದ್ ಹಬ್ಬ ಬರುತ್ತಿರುವ ಸಂದರ್ಭದಲ್ಲಿ ಭಜರಂಗದಳದವರು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಿದೆ.
ನಗರದಲ್ಲಿ ಇತ್ತಿಚೆಗೆ ಒಬ್ಬ ಉಗ್ರನನ್ನು ಬಂಸಲಾಗಿದೆ. ಕಳೆದ ಒಂದು ವರ್ಷದಲ್ಲಿ ನಗರದಲ್ಲಿ ಐದಕ್ಕೂ ಹೆಚ್ಚು ಉಗ್ರರು ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ಮಂದಿ ಏಕ ಕಾಲಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಳ್ಳಲಿದ್ದೇವೆ ಎಂದು ಭಜರಂಗದ ದಳದ ಮುಖಂಡರು ತಿಳಿಸಿದ್ದಾರೆ.