
ಜನ ಮನೆಯಿಂದ ಹೊರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಕಟ್ಟಲು ರೆಡಿಯಾಗಿರಬೇಕು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಡ್ಡಾಯ ಮಾಸ್ಕ್ ಜಾರಿಗೊಳಿಸಿದ್ದು, ಮಾಸ್ಕ್ ಹಾಕದಿದ್ದರೆ ಸೋಮವಾರದಿಂದ ದಂಡ ಹಾಕಲು ನಿರ್ಧರಿಸಿದೆ.ಇಷ್ಟು ದಿನ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿ ದಂಡಕ್ಕೆ ವಿನಾಯ್ತಿ ನೀಡಿದ ಸರ್ಕಾರ ಸೋಮವಾರದಿಂದ ದಂಡ ವಸೂಲಿಗೆ ಸೂಚನೆ ನೀಡಿದೆ.ಕೊರೊನಾ 4ನೇ ಅಲೆ ನಿಯಂತ್ರಣಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಮಾರ್ಷಲ್‍ಗಳಿಗೆ ಬಿಬಿಎಂಪಿ ಅಕಾರಿಗಳು ಮಾಸ್ಕ್ ಧಾರಣೆ ಮಾಡದಿದ್ದವರಿಗೆ ದಂಡ ವಿಸುವಂತೆ ಸೂಚನೆ ನೀಡಿದ್ದಾರೆ.
ಪಾಲಿಕೆಯ 198 ವಾರ್ಡ್‍ಗಳಲ್ಲಿ ಮಾಸ್ಕ್ ಧರಿಸದಿದ್ದರೆ 250 ರೂ. ದಂಡ ಬೀಳುವುದು ಗ್ಯಾರಂಟಿ. ಮಾಸ್ಕ್ ಹಾಕಿ ಕೊರೊನಾ ನಿಯಂತ್ರಿಸಿ. ಅಷ್ಟೇ ಅಲ್ಲದೆ ದಂಡ ಉಳಿಸಿ. ಸೋಮವಾರದಿಂದ ನಗರದ ಬಹುತೇಕ ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್‍ಗಳು ಫೀಲ್ಡಿಗಿಳಿಯಲಿದ್ದಾರೆ.
ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಕಡೆ ಮಾರ್ಷಲ್‍ಗಳು ಗಸ್ತು ತಿರುಗಲಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭ ಮದುವೆ ಮನೆ, ಪ್ರತಿಭಟನೆ ಸ್ಥಳಗಳಲ್ಲೂ ಕೂಡ ಮಾಸ್ಕ್‍ನ್ನು ಕಡ್ಡಾಯ ಮಾಡಲಾಗಿದೆ.