ರಾಜ್ಯ

ಸರ್ಕಾರಿ ಶಾಲೆ ಏಕಲವ್ಯರು… ಹಿರಿಯರನ್ನು ನೋಡಿ ದೊಣ್ಣೆವರಸೆ ಕಲಿತ ವಿದ್ಯಾರ್ಥಿಗಳು..!

ಚಾಮರಾಜನಗರ: ಶಾಲಾ‌ ಪಠ್ಯದಲ್ಲಿರುವ “ನೋಡಿ ಕಲಿ” ಎಂಬ ಮಾತಿನಂತೆ ಈ ಸರ್ಕಾರಿ ಶಾಲಾ ವಿದ್ಯಾರ್ಥಿ ಹಿರಿಯರನ್ನು ನೋಡಿ ದೇಸಿ ಕಲೆಯನ್ನು ರೂಢಿಸಿಕೊಂಡು, ಪ್ರಾವಿಣ್ಯತೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.

‌ಹೌದು, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ 6-7 ವಿದ್ಯಾರ್ಥಿಗಳು ತಮ್ಮೂರಿನ ಹಿರಿಯರು ಪ್ರದರ್ಶನ ಮಾಡುತ್ತಿದ್ದ ದೊಣ್ಣೆ ವರಸೆಯನ್ನು ಕಂಡು ಆಕರ್ಷಿತರಾಗಿ ಏಕಲವ್ಯರಂತೆ ನಿತ್ಯ ಅಭ್ಯಸಿಸಿ ಕಲಿತಿದ್ದು ಹಿರಿಯರನ್ನು ಮೀರಿಸುವಂತೆ ತಾವು ನೋಡಿ ಕಲಿತ ಕಲೆಯನ್ನು ಪ್ರದರ್ಶನ‌ ಮಾಡುತ್ತಿದ್ದಾರೆ.‌

ಸಿದ್ದಯ್ಯನಪುರ ಗ್ರಾಮದಲ್ಲಿ 7-8 ಮಂದಿ ಹಿರಿಯರು ಈಗಲೂ ಹಬ್ಬ-ಹರಿದಿನಗಳಲ್ಲಿ ಪಾರಂಪರಿಕ ಕಲೆಯಾದ ದೊಣ್ಣೆ ವರಸೆಯನ್ನು ಪ್ರದರ್ಶನ ಮಾಡಲಿದ್ದಾರೆ. ಅದರಂತೆ, ಕಳೆದ ದೀಪಾವಳಿ ಹಬ್ಬದಲ್ಲಿ ಹಿರಿಯರು ದೊಣ್ಣೆ ಹಿಡಿದು ಗರಗರನೇ ತಿರುಗಿಸುತ್ತಿದ್ದ ಚಾಕಚಕತ್ಯತೆಗೆ ಮನಸೋತ ಚಿರಂತ್, ಜಯಸುಂದರ್, ಪ್ರೀತಂ, ಜೀವನ್, ಅರ್ಜುನ್ ಎಂಬ ಬಾಲಕರು ತಾವು ದೊಣ್ಣೆ ಹಿಡಿದು ಏಕಲವ್ಯರಂತೆ ವರಸೆಯನ್ನು ಕಲಿತಿದ್ದಾರೆ.

ಇನ್ನು, ಬಾಲಕರು ಶಾಲೆಯಲ್ಲಿ ಪ್ರದರ್ಶನ ಮಾಡುತ್ತಿದ್ದ ದೊಣ್ಣೆ ವರಸೆ ಕಂಡು ಉತ್ತೇಜಿತಗೊಂಡ 8 ನೇ ತರಗತಿ ವಿದ್ಯಾರ್ಥಿನಿಯರಾದ ರೀತುಪ್ರಿಯಾ, ಅಕ್ಷತಾ ಎಂಬವರು ತಾವೇನೂ ಕಡಿಮೆ ಇಲ್ಲಾ ಎಂಬಂತೆ ಬಾಲಕರನ್ನು ನೋಡಿ ದೊಣ್ಣೆ ವರಸೆ ಕಲಿತಿದ್ದಾರೆ.ಏಕಲವ್ಯನಂತೆ ಅನುಕರಣೆ: ಈ ವಿದ್ಯಾರ್ಥಿಗಳಿಗೆ ಯಾವ ಗುರುವು ಇಲ್ಲದೆ ದೊಣ್ಣೆ ವರಸೆ ಕಲಿತಿದ್ದಾರೆ.

ಹಿರಿಯರ ಕಲೆಯನ್ನು ಕಂಡು ಅವರನ್ನು ಅನುಕರಿಸಿ ಇದನ್ನು ರೂಢಿಸಿಕೊಂಡಿದ್ದು ಅದರಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ. ಎರಡು ಕೈಯಲ್ಲಿ ದೊಣ್ಣೆ ತಿರುಗಿಸುವುದು, ದೊಣ್ಣೆ ಸಹಾಯದಿಂದ ನಡೆಯುವುದು, ಸಮರಾಭ್ಯಾಸದಂತೆ ಪಟ್ಟು ಹಾಕುವುದು ಇವರುಗಳು ಸಿದ್ಧಿಸಿಕೊಂಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button